
ಉದಯವಾಹಿನಿ ಯಡ್ರಾಮಿ: ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರಾಮ ತೀರ್ಥವು ಒಂದು ಐತಿಹಾಸಿಕ ತಾಣವಾಗಿದ್ದು ಪುಣ್ಯಕ್ಷೇತ್ರವು ಹೌದು ಶ್ರೀರಾಮನು ವನವಾಸಕ್ಕೆ ತೆರಳುವ ವೇಳೆಯಲ್ಲಿ ಯಡ್ರಾಮಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇ ತೀರ್ಥದಲ್ಲಿ ಸ್ನಾನ ಮಾಡಿ ವನವಾಸಕ್ಕೆ ತೆರಳುತ್ತಾರೆ ಹೀಗಾಗಿ ಇ ಸ್ಥಳಕ್ಕೆ ರಾಮತೀರ್ಥ ಎಂದು ಹೆಸರು ಬಂದಿದೆ. ಹಾಗೆ ಯಡ್ರಾಮಿ ಪಟ್ಟಣದ ಇನ್ನೊಂದು ಕಡೆ ಶ್ರೀ ರಾಮನು ಲಿಂಗ ಪ್ರತಿಷ್ಠಾಪನೆ ಮಾಡುತ್ತಾರೆ ಇದಕ್ಕೆ ರಾಮಲಿಂಗ ದೇವಸ್ಥಾನ ಎಂದು ಕೂಡ ಕರೆಯಲ್ಪಡಲಾಗುತ್ತಿದೆ. ಪರ್ಷಿಯನ ಶೈಲಿಯಲ್ಲಿರುವ ಯಡ್ರಾಮಿ, ರಾಮತೀರ್ಥವು ಈಗ ಇದರ ಕಟ್ಟಡವು ಎಲ್ಲಾ ಕಡೆ ಶಿಥಿಲಗೊಂಡು ಬೀಳುವ ಹಂತದಲ್ಲಿದೆ ಇಂಥ ಐತಿಹಾಸಿಕ ಇತಿಹಾಸವಿರುವ ಈ ಸ್ಥಳವು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಹಾಳು ಬಿದ್ದಿದೆ ಎಂದು ಹೇಳಬಹುದು. ಯಡ್ರಾಮಿ ಮತ ಕ್ಷೇತ್ರದಿಂದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಎನ್ ಧರ್ಮಸಿಂಗ್ ಅವರು ಇರುವಾಗಲೇ ಯಡ್ರಾಮಿಯನ್ನು ಕರ್ನಾಟಕದ ಮಾದರಿ ತಾಲೂಕವನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು ಹಾಗೂ ಯಡ್ರಾಮಿಯನ್ನು ಸಿಂಗಾಪುರವನ್ನಾಗಿ ಕೂಡ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು ತಾಲೂಕು ಇದ್ದರೂ ಇಲ್ಲದಂತಿರುವ ಯಡ್ರಾಮಿಯು ಹಿಗಿರುವಾಗ ಯಡ್ರಾಮಿ ಸಿಂಗಾಪುರ ಆಗಲೇ ಇಲ್ಲ ಮಾದರಿ ತಾಲೂಕು ಕೂಡ ಆಗಲಿಲ್ಲ ಆದರೆ ಯಡ್ರಾಮಿಯ ರಾಮತೀರ್ಥವು ಪ್ರವಾಸೋದ್ಯಮ ಇಲಾಖೆಯವರು ಇತ್ತ ಕಡೆ ಗಮನಹರಿಸಬೇಕೆಂದು ಯಡ್ರಾಮಿ ಪಟ್ಟಣದ ಸ್ಥಳೀಯ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
