ಉದಯವಾಹಿನಿ, ಕಾರಟಗಿ: ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷರ ಮೀಸಲಾತಿ ವಿಷಯಕ್ಕೆ ತಡೆಯಾಜ್ಞೆಗೆ ಸಂಬ0ಧಿಸಿದ ಗ್ರಾಮದ ಬಸವೇಶ್ವರ ಸರ್ಕಲ್ ಹತ್ತಿರ ಎರಡು ಗುಂಪುಗಳ ಮದ್ಯ ಮನಸ್ಥಾಪದಿಂದ ಮಾರಾಮಾರಿಯೊಂದಿಗೆ ವಾಗ್ವಾದ ಉಂಟಾಗಿ ಪರಿಸ್ಥಿಸಿ ವಿಕೋಪಕ್ಕೆ ತಿರುಗಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಶನಿವಾರ ರಾತ್ರಿ ಸ್ಥಳಕ್ಕೆ ತೆರಳಿದ ಕಾರಟಗಿ ಪಿ.ಐ. ಸಿದ್ದರಾಮಯ್ಯಸ್ವಾಮಿ ಹಾಗೂ ಸಿಬ್ಬಂದಿ ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನೆಗೆ ಸಂಬ0ಧಿಸಿದ0ತೆ ಇಲಾಖೆ ಪೂರ್ವಾಪರ ವಿಚಾರಣೆ ನಡೆಸಿ ಪರಿಶೀಲಿಸಿದ ನಂತರ ಸುರೇಶ ತಂದೆ ಹನುಮಂತ ನಾಯಕ, ಪಂಪಾಪತಿ ಕೆಂಡದ, ದೊಡ್ಡನಗೌಡ ಪಾಟೀಲ್, ದೇವರಾಜ ನಾಯಕ, ಸೇರಿದಂತೆ ೩೦ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪರಿಸ್ಥಿತಿಯ ಗಂಭಿರತೆಯನ್ನು ಅರಿತು ಸ್ಥಳಕ್ಕೆ ರಾತ್ರಿ ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶಕುಮಾರ, ಕೊಪ್ಪಳ ಇನ್‌ಚಾರ್ಜ ವಿಜಯನಗರ ಎಸ್.ಪಿ.ಹರಿಬಾಬು, ಗಂಗಾವತಿ ವಿಭಾಗ ಡಿ.ವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪೊಲೀಸ್ ಪಾಟೀಲ್ ಗ್ರಾಮದಲ್ಲಿ ಪರಿಸ್ಥಿಯನ್ನು ಹತೋಟಿಗೆ ತರಲು ಟಿಕಾಣಿ ಹೂಡಿದ್ದರು. ರವಿವಾರ ಕೊಪ್ಪಳ ಎಸ್‌ಪಿ. ಯಶೋಧಾ ವಂಟಿಗೋಡಿ ಗ್ರಾಮಕ್ಕೆ ಬೇಟಿ ನೀಡಿ ಪರಿಸ್ಥಿಯನ್ನು ಅವಲೋಕಿಸಿದ್ದಾರೆ ಎಂದು ಪಿ.ಐ. ಸಿದ್ರಾಮಯ್ಯ ಸ್ವಾಮಿ ತಿಳಿಸಿದರು.
“ಬೂದಗುಂಪಾ ಗ್ರಾ.ಪಂ.ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬ0ಧ ಪಟ್ಟಂತೆ ವೈಮನಸ್ಸಿನಿಂದ ನಡೆದ ಕಲಹ ಎಂದು ತಿಳಿದುಬಂದಿದೆ. ಯಾವುದೇ ರೀತಿಯ ಅನಾಹುತ ನಡೆದಿಲ್ಲಾ. 30 ಜನರ ಮೇಲೆ ಪ್ರಕರಣ ದಾಖಲಾಗಿದ್ದು 8 ಜನರನ್ನು ಇಗಾಗಲೇ ಬಂಧಿಸಲಾಗಿದೆ. 3. ಕೆಎಸ್‌ಆರ್‌ಪಿ ವ್ಯಾನ್, 2ಡಿ.ಆರ್ ವ್ಯಾನ್, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ 120 ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ. ಘಟನೆಗೆ ಸಂಬ0ಧಿಸಿದ0ತೆ ತನಿಖೆ ಮುಂದುವರೆದಿದೆ. . ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ಬಿಗಿ ಪೊಲೀಸ್ ಭದ್ರತೆ ವದಗಿಸಲಾಗಿದೆ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ”

Leave a Reply

Your email address will not be published. Required fields are marked *

error: Content is protected !!