ಉದಯವಾಹಿನಿ ಕೊಲ್ಹಾರ: ಕರ್ನಾಟಕದಲ್ಲಿ ಮಾತ್ರ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಜೊತೆಗೆ ಉಪಹಾರ, ಶೂ ನೀಡುತ್ತೇವೆ. ಈ ಸೌಲಭ್ಯ ಮಾತ್ರ ಕರ್ನಾಟಕದಲ್ಲಿ ಇದೆ. ಹೂರತು ಬೇರೆ ರಾಜ್ಯದಲ್ಲಿ ನೀಡುವುದಿಲ್ಲಾ, ಕರ್ನಾಟಕದ ವೈಶಿಷ್ಟ ಹೀಗಿದೆ, ಒಂದೇ ಜಾತಿ ಮತ್ತು ಒಂದೇ ಮಕ್ಕಳಿಗೆ ಸೀಮಿತ ಇಲ್ಲಾ .ಎಲ್ಲಾ ಮಕ್ಕಳಿಗೆ ಸಮನ್ವಯವಾಗಿ ನೀಡುತ್ತೇವೆ ಎಂದು ಹೇಳಿದರು. ಪಟ್ಟಣದ ಆಜಾದ್ ನಗರದ ವಾರ್ಡ ನಂ ೧೫ ರಲ್ಲಿ ನೂತನವಾಗಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು, ಬಡ ಮಕ್ಕಳಿಗೆ ಕೂಡ ಅಲ್ಲೆ ಕಲಿತಕಂತಹ ವಸತಿ ಶಾಲೆಯನ್ನು ಮಾಡಿದ್ದೇವೆ, ಪಕ್ಕದಲ್ಲಿರುವ ಮುಳವಾಡ ಗ್ರಾಮದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮತ್ತು ಶಾಲಾ ಆವರಣದಲ್ಲಿ ಕಾಯಿಪಲ್ಲೆ ಬೆಳೆಯನ್ನು ಬೆಳೆಯುವ ವ್ಯವಸ್ಥೆಯನ್ನು ಶಾಲೆಯ ಅಧ್ಯಕ್ಷ ಮತ್ತು ಸಹಕಾರದೊಂದಿಗೆ ಮಾಡಿಕೊಂಡಿದ್ದಾರೆ. ನೀವು ಕೂಡ ಎಲ್ಲರೂ ಸಹಕಾರದೊಂದಿಗೆ ನಿಮ್ಮ ಶಾಲಾ ಆವರಣವನ್ನು ಸುಧಾರಣೆ ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕೇವಲ ವಿದ್ಯ ಮಾತ್ರ ಮನುಷ್ಯನ ಬದಲಾವಣೆ ಮಾಡುವಂತ ಪಾತ್ರ ಹೊಂದಿದೆ, ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಹೊರತು ಆಸ್ತಿ ಮಾಡಬೇಡಿ ಮಕ್ಕಳನ್ನೇ ವಿದ್ಯೆ ಆಸ್ತಿ ಮಾಡಿ ಒಳ್ಳೆ ಗುಣಾತ್ಮಕ ಮುಂದೆ ಆಗುತ್ತಾರೆ. ಈವಾಗಿನ ಶಿಕ್ಷಕರಿಗೆ ಮಕ್ಕಳಿಗೆ ಕಲಿಸಲು ಸಾಕಷ್ಟು ಸೌಲಭ್ಯಗಳನ್ನು ದೊರೆತಿದ್ದು ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡುವ ಜವಾಬ್ದಾರಿ ಕಾರ್ಯ ನಿರ್ವಹಿಸಬೇಕು. ಹಿಂದಿನ ಸರ್ಕಾರದವರು ಮುಳುಗಿಸುವ ಕೆಲಸ ಮಾಡಿದ್ದಾರೆ…?
 ಆದರೆ ನಿಮ್ಮನ್ನು ನಾನು ಮುಳುಗಿಸುವ ಕೆಲಸ ಮಾಡುವುದಿಲ್ಲ ಪ್ರಾಮಾಣಿಕವಾಗಿ ಪರ್ಯಾಯದ ಕೆಲಸ ಮಾಡುತ್ತೇನೆ. ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಕಾಣದೆ ಹಾಗೆ ಉಳಿದಿರುವ ಕೊಲ್ಹಾರ ಗ್ರಾಮವನ್ನು ಎರಡು ವರ್ಷದಲ್ಲಿ ಮಾತ್ರ ಮಾದರಿ ಗ್ರಾಮವನ್ನಾಗಿ ಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಶಿವಾನಂದ್ ಪಾಟೀಲ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕೆಲವು ಶಿಕ್ಷಕರು ಒಳ್ಳೆಯವರಾಗಿದ್ದರೆ, ಕೆಲವರು ಮಾತ್ರ ಶಿಕ್ಷಕರು ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಅದನ್ನು ಬಿಟ್ಟು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಆದ್ಯತೆ ನೀಡಬೇಕು. ಒಬ್ಬ ಶಿಕ್ಷಕರು ರಾಜಕಾರಣಿ ಮಾಡುವುದರಿಂದ ನಿಮ್ಮ ಸಮೂಹಕ್ಕೆ ಕೆಟ್ಟ ಹೆಸರು ಬರುವಂತ ಮುಂದೆ ನಿರ್ಮಾಣವಾಗಬಹುದು ಎಂದು ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದರು’
ನಂತರ ದಿವ್ಯ ಸಾನಿಧ್ಯ ವಹಿಸಿ ಅಲ್ಹಾಜ್ ಭಕ್ತಿಯಾರ್ ಖಾನ್ ಪಠಾಣ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ್ ರಾಠೋಡ ಮಾತನಾಡಿದರು ಶಾಲಾ ಸಮಿತಿಯ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಸಚಿವರಿಗೆ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಕೃಮೇಯೋ ಕಾರ್ಯನಿರ್ವಾಹಕ ಅಭಿಯಂತರು ಎಸ್ ಎಸ್ ಹಿರೇಮಠ, ತಾಲೂಕು ತಹಶೀಲ್ದಾರ್ ಎಸ್ ಎಸ್ ನಾಯಕಲಮಠ, ಪಂ ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಮುಖಂಡರಾದ ಆರ್.ಬಿ ಪಕಾಲಿ, ಭಾಷಾಸಾಬ ಶಿರೂರ, ನಬಿಸಾಬ ಹೊನ್ಯಾಳ, ದಾದಾ ಗೂಗಿಹಾಳ, ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸೀಫ್ ಗಿರಗಾಂವಿ, ದಸ್ತಗೀರ ಕಲಾದಗಿ, ಫೈರೋಜ ಬಳಗಾರ, ರಫೀಕ್ ಹವಾಲ್ದಾರ್, ಹಸನಸಾಬ ಮುಲ್ಲಾ, ಅಯ್ಯೂಬ ದಿಂದಾರ,ರಾಜು ಆವಿಯಾಗಿ,ಸಿಡ್ಲಪ್ಪ ತಳಗೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!