ಉದಯವಾಹಿನಿ ಸಿಂಧನೂರು : ಅಗಸ್ಟ್ 12.ನಾಡಿನ ದೊರೆ ಕರ್ನಾಟಕದ ಹೆಮ್ಮೆಯ ಪುತ್ರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದರು. ಸಿದ್ದರಾಮಯ್ಯ ಅಭಿಮಾನಿಗಳು ಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ ಲಿಂಗರಾಜ ಹೊಸಳ್ಳಿ ಅವರ ನೇತೃತ್ವದಲ್ಲಿ.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 76ನೇ ಹುಟ್ಟು ಹಬ್ಬವನ್ನು ನಗರದ ಬುದ್ಧಿ ಮಾಂದ್ಯ ಹಾಗೂ ವಯಸ್ಕರ ಬುದ್ಧಿ ಮಾಂದ್ಯ ಕಾರುಣ್ಯ ಆಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ನಂತರ ಈ ಹುಟ್ಟು ಹಬ್ಬದ ಶುಭಾಶಯಗಳು ಹೇಳುವುದರ ಮೂಲಕ ಮಾತನಾಡಿದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ತುರ್ವಿಹಾಳ್ ಅವರು .ಮುಖ್ಯಮಂತ್ರಿ.ಸಿದ್ದರಾಮಯ್ಯ ಸಾಹೇಬರ ರಾಜ್ಯದ ಬಡಬಗ್ಗರು ಕೂಲಿ ಕಾರ್ಮಿಕರು ಸದಾ ಚಿಂತಿಸುವ ಏಕೈಕ ಮುಖ್ಯಮಂತ್ರಿ ಎಂದರೆ ತಪ್ಪಾಗಲಾರದು ಬಡವರ ಹಸಿವಿನಿಂದ ಬಳಲಲು ಬಾರದೆಂದು ಉದ್ದೇಶಕ್ಕೆ ರಾಜ್ಯದ ಮೊದಲ ಬಾರಿ ಮುಖ್ಯಮಂತ್ರಿಯಾದ ದಿನವೇ ಉಚಿತ ಅನ್ನಭಾಗ್ಯ ಯೋಜನೆ ಜೊತೆಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದ ಬಡ ಕೂಲಿ ಕಾರ್ಮಿಕರ ಆಶಾಕಿರಣ ಎಂದು ಗುರುತಿಸಿಕೊಂಡಿರುವ ವ್ಯಕ್ತಿ ಯಾರಾದರೂ ಇದ್ದರೆ ನಮ್ಮ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಎಂದು ಡಾ.ನಾಗವೇಣಿ ಅವರು ಕೊಂಡಾಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಲಿಂಗರಾಜ್, ಮಾತನಾಡಿದರು ಗೌರವ ಅಧ್ಯಕ್ಷರಾದ ಶರಣಪ್ಪ ಹಿರೇಮಠ್, ಕೆ ನಾಗಲಿಂಗಪ್ಪ ಮಾಜಿ ಅಧ್ಯಕ್ಷರು, ಶಿವು ಗ್ರಾಮ ಪಂಚಾಯತ್ ಸದಸ್ಯರು, ಲಿಂಗರಾಜ್ ಗವಿಮನಿ, ಶಿವಪ್ಪ ಗೋದಿ, ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ. ಚೆನ್ನಬಸವ ಸ್ವಾಮಿ ಹಿರೇಮಠ, ಗೀತ ಕುಲಕರ್ಣಿ, ಇಂದುಮತಿ. ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!