ಉದಯವಾಹಿನಿ,ಚಿಂಚೋಳಿ: ಗ್ರಾಮೀಣ ಭಾಗದ ಸಾವಿರಾರು ರಂಗಭೂಮಿ ಕಲಾವಿದರನ್ನು ಹುರಿದುಂಬಿಸಿ ಬೆಳಸಿ ಕಲಾವಿದರನ್ನಾಗಿ ಗುರುತಿಸಿ ಕಲಾ ಪ್ರತಿಭೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಸ್ವತಃ ನೂರಾರು ನಾಟಕಗಳನ್ನು ಬರೆದಿರುವ ಖ್ಯಾತ ಕವಿಗಳು ರಂಗಭೂಮಿಯ ಪ್ರಸಿದ್ದ ಕಲಾವಿದ ಶಂಕರಜೀ ಹೂವಿನಹಿಪ್ಪರಗಿಯವರಿಗೆ ಸಲ್ಲುತ್ತದೆ ಎಂದು ಹಾರಕೂಡ ಚನ್ನಬಸವೇಶ್ವರ ನಾಟ್ಯ ಸಂಘದ ಅಧ್ಯಕ್ಷ ಶಾಮರಾವ ಕೊರವಿ ಹೇಳಿದರು.ತಾಲ್ಲೂಕಿನ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಾ ಹಾರಕೂಡ ಚನ್ನಬಸವೇಶ್ವರ ನಾಟ್ಯ ಸಂಘ ಹಾಗೂ ರಂಗ ಮಿತ್ರ ನಾಟ್ಯ ಸಂಘ ಕಲಬುರಗಿ ನೂತನವಾಗಿ ಗ್ರಾಪಂ.ಅದ್ಯಕ್ಷರು,ಉಪಾದ್ಯಕ್ಷರು ಕಲಾವಿದರ ಬಳಗದವರು ಆಯ್ಕೆಯಾದ ಹಿನ್ನಲೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಆಯ್ಕೆಯಾದ ರಂಗಭೂಮಿ ಕಲಾವಿದರು ಜನರ ಸೇವೆಮಾಡಿ ಗ್ರಾಮ ಪಂಚಾಯತಿಯ ಸಮಸ್ಯೆಗಳನ್ನು ಈಡೇರಿಸಬೇಕು ಜನರ ವಿಶ್ವಾಸ ಉಳಿಸಿಕೊಳ್ಳಬೇಕು,ಜನರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.ಚಿಮ್ಮನಚೋಡ‌ ಗ್ರಾಪಂ.ಅದ್ಯಕ್ಷ ಮಲ್ಲಿಕಾರ್ಜುನ ಮೋಗಡಂಪಳ್ಳಿ,ಚಿಮ್ಮಾಯಿದ್ಲಾಯಿ ಗ್ರಾಪಂ.ಅದ್ಯಕ್ಷ ಗೈಬಣ್ಣಾ ವಾಲಿಕಾರ,ಹಸರಗುಂಡಗಿ ಗ್ರಾಪಂ.ಅದ್ಯಕ್ಷ ಸುಪುತ್ರ ಗೌತಮ ಇತಕಪೂರ,ಅಣವಾರ ಗ್ರಾಪಂ.ಅದ್ಯಕ್ಷರ ಸುಪುತ್ರ ಬಾಬುರಾವ ತಳವಾರ,ಪಸ್ತಾಪೂರ ಗ್ರಾಪಂ.ಉಪಾದ್ಯಕ್ಷ ಸಂತೋಷ ಖನ್ನಾರವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಲಕ್ಷ್ಮಣ ಆವುಂಟಿ ಮಾತನಾಡಿ ಕಲಾ ಸಂಘಕ್ಕೆ ಹೆಮ್ಮೆಯ ವಿಷಯ ಕಲೆಗೆ ಬೆಲೆ ಒಂದಿಲ್ಲ ಒಂದು ದಿವಸ ಖಂಡಿತಾ ಸಿಕ್ಕೆ ಸಿಗುತ್ತೆ ಎಂಬುವುದಕ್ಕೆ ಇವರು ಗ್ರಾಪಂನಲ್ಲಿ ಆಯ್ಕೆ ಹಾಗೂ ಜನರು ಇವರ ಮೇಲೆ ಇಟ್ಟಿರುವ ಭರವಸೇಯೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಗನ್ನಾಥ ಕಟ್ಟಿ,ಕವಿಗಳಾದ ಶಂಕರಜೀ ಹೂವಿನ ಹಿಪ್ಪರಗಿ,ಶಿವಯೋಗಿ ರುಸ್ತಾಂಪೂರ,ಮಲ್ಲಿಕಾರ್ಜುನ ಬಿರದಾರ,ಕಾಶಿನಾಥ ಬಿರಾದಾರ,ಚಂದು ಚವ್ವಾಣ,ಶ್ರೀಮಂತ ಹಂಗನಳ್ಳಿ,ಸುನೀಲ್ ದೋಡಮನಿ,ಬಾಬುರಾವ,ಚಂದ್ರಶೇಖರ ಲಕಶೆಟ್ಟಿ,ಪ್ರಶಾಂತ ಕಟ್ಟಿ,ಸತೀಶ ತಳವಾರ,ಶ್ರೀಧರ ವಗ್ಗಿ,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!