
ಉದಯವಾಹಿನಿ ಸಿಂಧನೂರು: ನಗರದ ಆರ್ ಜಿ ಎಮ್ ಶಾಲೆಯಲ್ಲಿ 76ನೇ ಸ್ವಾತಂತ್ರೋತ್ಸವ ಸಂಭ್ರಮ ಸಡಗರದಿಂದ ಕೊಡಿದ ನನ್ನ ಮಣ್ಣು ನನ್ನ ದೇಶ ಮತ್ತು ಸಿಂಧನೂರು ನಡೆ ಸ್ವಾತಂತ್ರ್ಯದ ಕಡೆ ಜೊತೆಗೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು 371(ಜೆ) ಕಲ್ಯಾಣ ಕರ್ನಾಟಕಕ್ಕೆ ಬಂದು ವಿಶೇಷವಾದ ಕಾನೂನು ಮಾಡಲಾಗಿದೆ.ಈ ಭಾಗ ಹಿಂದುಳಿದಿದ್ದು ಅದಕ್ಕಾಗಿ ಸಮೃದ್ಧವಾಗಿ ಕೂಡಿರಬೇಕು 2011ರಂದು ಮಲ್ಲಿಕಾರ್ಜುನ ಖರ್ಗೆ ಜಿ ಅವರ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಒತ್ತಡವನ್ನು ಹಾಕುವುದರ ಮೂಲಕ ಕಾನೂನು ಮಂಡಿಸಿದ್ದಾರೆ ಎಂದು ಹೇಳಿದರು 371(ಜೆ )ಕಾನೂನು ಆಗಿದ್ದರಿಂದ ಇವತ್ತು ಇಂಜಿನಿಯರ್ ಮೆಡಿಕಲ್ ಐ ಎ ಎಸ್. ಕೆ ಎಸ್ ಮತ್ತು ಇತರ ದೊಡ್ಡ ದೊಡ್ಡ ಕೋರ್ಸುಗಳನ್ನು ಮೀಸಲಾತಿ ಆಧಾರದ ಮೇಲೆ ಪಡೆಯುತ್ತಿದ್ದೇವೆ ಎಂದರೆ ಅದು ಮಲ್ಲಿಕಾರ್ಜುನ ಖರ್ಗೆ ಅವರ ದೊಡ್ಡ ಕೊಡುಗೆ ಎಂದು ಹೇಳಿದರು .
75-80 ಪರ್ಸೆಂಟೇಜ್ ಪಡೆದವರಿಗೆ ಕಾನೂನು ಮಾಡಲಾಗಿದೆ ಅದರಿಂದ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಕಾಳಜಿ ವಹಿಸಬೇಕು ಸರ್ಕಾರದಲ್ಲಿ ನನೌಕರಿ ಪಡೆಯಲಿಕ್ಕೆ ಸಾಧ್ಯ ವಾಗುತ್ತದೆ.ಡಿಗ್ರಿ ಮುಗಿಸಿದ ಈಗಾಗಲೇ 30 ಸಾವಿರ ಕೆಲಸ ನೀಡಲಾಗಿದೆ ಸಮಾಜಮುಖಿ ನಿರ್ಣಯ ಸಲಹೆಗಳು ನೀಡಬೇಕು ನನ್ನ ದೇಶವನ್ನು ಕಟ್ಟುವಂತೆ ಒಳ್ಳೆಯ ಭವಿಷ್ಯದ ವಿದ್ಯಾರ್ಥಿಗಳು ಎಲ್ಲರ ನೈತಿಕತೆ ವಿಶ್ವಾಸ ಸ್ನೇಹದೊಂದಿಗೆ ಒಳ್ಳೆಯ ಬಾಂಧವ್ಯ ಇದ್ದಾಗ ಮಾತ್ರ ನಾಡನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದ ಅವರು 76ನೇ ಸ್ವಾಂತಂತ್ರ್ಯ ದಿನೋತ್ಸವದ ಬಗ್ಗೆ ಚಿಂತನೆ ಮಾಡುವ ದಿನವಾಗಿದೆ ಸ್ವಾಂತಂತ್ರ್ಯ ನಂತರ ಬ್ರಿಟಿಷರು ನಮ್ಮನ್ನು ಗುಲಾಮರನ್ನಾಗಿ ಮಾಡಿನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆದಿದ್ದರೂ. ಅವತ್ತಿನ ದಿನ ಈ ತರದ ಸೌಲಭ್ಯಗಳ ಇದ್ದಿದ್ದಿಲ್ಲ ಹಿಂದಿನ ದೇಶವನ್ನು ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್ ಪಕ್ಷ 1875 ರಲ್ಲಿ ಸ್ವಾತಂತ್ರ್ಯ ಚಳುವಳಿ ಉಪವಾಸ ಸತ್ಯಾಗ್ರಹ ದೇಶಕ್ಕೆ ಮಾದರಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಂದ್ರಕಾಂತ ನಾಯಕ್ ವಿಧಾನ ಪರಿಷತ್ ಸದಸ್ಯ ಶರಣೆಗೌಡ್ ಬಯ್ಯಾಪುರ ಮಸ್ಕಿ ಶಾಸಕ ಬಸನಗೌಡ ಪಾಟೀಲ್ ತುರುವಿಹಾಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಲಿಂಗಸೂಗೂರು ಸಹಾಯಕ ಆಯುಕ್ತ ಶಿಂದೆ ಅವಿನಾಶ್ ಜಿಲ್ಲಾ ಎಸ್ ಪಿ ನಿಖಿಲ್. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ಹೆಚ್ ದೇಸಾಯಿ ನಗರ ಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು
