ಉದಯವಾಹಿನಿ,ಬೀಜಿಂಗ್: ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ಪ್ರದೇಶದಲ್ಲಿ ಅಬ್ಬರದ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಜನಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಪರ್ವತ ಪ್ರವಾಹ ಮತ್ತು ತೀವ್ರ ರೀತಿಯಲ್ಲಿ ಮಣ್ಣು ಕುಸಿತದ ಪರಿಣಾಮ ೨೧ ಜನರು ಸಾವನ್ನಪ್ಪಿ, ಆರು ಮಂದಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕ್ಸಿಯಾನ್ ಜಿಲ್ಲೆಯ ಚಾಂಗ್‌ನ ಹಳ್ಳಿಯೊಂದರಲ್ಲಿ ಭಾರೀ ಮಳೆ, ಪರ್ವತ ಪ್ರವಾಹಗಳು ಮತ್ತು ಮಣ್ಣಿನ ಕುಸಿತಗಳು ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಸಾವು-ನೋವಿನ ವರದಿಯಾಗಿದೆ. ಚೀನಾದ ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ೨೧೦ರಲ್ಲಿ ಎರಡು ಮನೆಗಳು ಮತ್ತು ೨೧ ವಿಭಾಗಗಳು ದುರಂತದ ಪರಿಣಾಮ ಹಾನಿಗೊಳಗಾಗಿವೆ. ಇದರ ಜೊತೆಗೆ ಮೂರು ವಿದ್ಯುತ್ ವಿದ್ಯುತ್ ಸರಬರಾಜು ಹಾಗೂ ಇತರೆ ಹಲವಾರು ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ. ಇದರಿಂದ ೯೦೦ ಮನೆಗಳ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ ಎಂದು ಕ್ಸಿಯಾನ್ ಬ್ಯೂರೋ ಆಫ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಅನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಕ್ಸಿಯಾನ್ ನಗರದಲ್ಲಿ ಸದ್ಯ ತಕ್ಷಣವೇ ಆನ್‌ಸೈಟ್ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲಾಗಿದ್ದು, ಶೋಧ, ಪಾರುಗಾಣಿಕಾ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ೯೮೦ ಕ್ಕೂ ಹೆಚ್ಚು ಸಿಬ್ಬಂದಿಯ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಸೇರಿದಂತೆ ೧೪ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!