ಉದಯವಾಹಿನಿ, ಬೇಸಿಗೆ ದಿನಗಳಲ್ಲಿ ಮನುಷ್ಯನಿಗೆ ನೀರಿನ ಅಂಶ ಶರೀರಕ್ಕೆ ಅಧಿಕವಾಗಿ ಬೇಕಾಗುತ್ತದೆ. ಬೆವರಿನ ಮೂಲಕ ಹೆಚ್ಚು ನೀರು ಶರೀರದಿಂದ ವ್ಯಯವಾಗುವುದರಿಂದ ನೀರಿನ ಅಂಶ ಇರುವಂತಹ ಹಣ್ಣುಗಳು, ತರಕಾರಿಗಳು, ಎಳನೀರು ಇಂತಹದನ್ನು ನೋಡಿದಾಗ ಬೇಕು ಅನಿಸುತ್ತದೆ. ಈ ಸಮಯದಲ್ಲಿ ಈ ಕಲ್ಲಂಗಡಿ ಹಣ್ಣು ಬಹಳ ಉಪಯುಕ್ತವಾಗುತ್ತದೆ.
ಪೌಷ್ಠಿಕಾಂಶಗಳು: ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ತೇವಾಂಶ, ಸಸಾರಜನಕ, ಕೊಬ್ಬು, ಖನಿಜಾಂಶ, ಶರ್ಕರಪಿಷ್ಠ, ಸುಣ್ಣ, ರಂಜಕ, ಕಬ್ಬಿಣ, ಥಯಾಮಿನ್, ನಿಯಾಸಿನ್, ಹಾಗೂ ಬಿ೧, ಬಿ೨, ಸಿ ಜೀವಸತ್ವಗಳು ಇದರಲ್ಲಿ ಇವೆ.
೧. ತಡೆಮೂತ್ರಕ್ಕೆ: ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸಕ್ಕೆ ೧/೨ ಚಮಚ ಜೀರಿಗೆ ಪುಡಿಯನ್ನು ಮಿಶ್ರಣಮಾಡಿ ಕುಡಿಯುವುದರಿಂದ ತಡೆದಿದ್ದ ಮೂತ್ರ ಸಲೀಸಾಗಿ ವಿಸರ್ಜನೆಯಾಗುತ್ತದೆ.
೨. ಅರಿಶಿನ ಕಾಮಾಲೆ: ಅರಿಶಿನ ಕಾಮಾಲೆಯು ಬಂದಾಗ, ಕಲ್ಲಂಗಡಿ ಹಣ್ಣಿನ ರಸಕ್ಕೆ ಸಮಪ್ರಮಾಣದಲ್ಲಿ ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಸೇವಿಸುತ್ತಿದ್ದರೆ ಕೆಲವು ದಿನಗಳಲ್ಲಿ ಅರಿಶಿನ ಕಾಮಾಲೆ ನಿವಾರಣೆಯಾಗುತ್ತದೆ. ೩. ಮಧುಮೇಹಿಗಳಿಗೆ: ಬೇಸಿಗೆಯ ದಿನದಲ್ಲಿ ಉಂಟಾಗುವ ಆಯಾಸ, ಬಳಲಿಕೆ, ಬಾಯಿ ಒಣಗುವಿಕೆ, ಆಮ್ಲಪಿತ್ತಗಳಿಗೆ ಇದರ ರಸ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ೪. ಸ್ತ್ರೀ ಸಂಬಂಧಿ ಸಮಸ್ಯೆಗಳಿಗೆ: ಈ ಹಣ್ಣಿನ ರಸ ಸೇವನೆಯಿಂದ ಸಮಸ್ಯೆಗಳು ದೂರವಾಗುತ್ತದೆ.
೫. ಮಲವಿಸರ್ಜನೆ: ಮಲವಿಸರ್ಜನೆ ಸುಲಭವಾಗಿ ಆಗಲು ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ.
