ಉದಯವಾಹಿನಿ, ನವದೆಹಲಿ, : ಮುಂದಿನ ಬಾರಿಯೂ ನಾವೇ ಅಕಾರಕ್ಕೆ ಬರಲಿದ್ದೇವೆ ಎಂಬ ಪ್ರಧಾನಿ ನರೇಂದ್ರಮೋದಿ ಹೇಳಿಕೆಗೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್‍ನಲ್ಲಿ ಬರೆದಿರುವ ಕಪಿಲ್ ಸಿಬಲ್, ಅಚ್ಛೇ ದಿನ್ ಎಲ್ಲಿತ್ತು ಮತ್ತು ಅವರಿಗೆ ಸುಮಾರು 10 ವರ್ಷಗಳಿಂದ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರವನ್ನು ತೊಡೆದುಹಾಕುವುದಾಗಿ ಪ್ರಧಾನಿಯವರೇ ನೀವು ಹೇಳಿದ್ದೀರಿ. ಆದರೆ ನಿಮಗೆ ಸುಮಾರು 10 ವರ್ಷಗಳು ಇದ್ದವು. ಏನಾಯಿತು? ಅಚ್ಛೇ ದಿನ್ ಎಲ್ಲಿದೆ. ಮರೆತುಹೋಗಿದೆ? ಹಣದುಬ್ಬರವನ್ನು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ತರಕಾರಿಗಳು ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ 5 ವರ್ಷಗಳ ಸುವರ್ಣ ಅವ ಯಾರಿಗಾಗಿ? ಬಡವರು, ದಲಿತರು, ಅಲ್ಪಸಂಖ್ಯಾತರು ಅಥವಾ ಶ್ರೀಮಂತರು, ಉದ್ಯಮಿಗಳಿಗಾ ಎಂದು ಪ್ರಶ್ನೆ ಹಾಕಿದ್ದಾರೆ. ಯುಪಿಎ 1 ಮತ್ತು 2ರ ಅವಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್, ಕಳೆದ ವರ್ಷ ಮೇನಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
