ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಪ್ರಥಮ ಆದ್ಯತೆ ಲೋಕಸಭೆ ಚುನಾವಣೆಯಾಗಿದ್ದು, ಇದಕ್ಕಾಗಿ ಅನ್ಯ ಪಕ್ಷಗಳಿಂದ ಬರುವ ನಾಯಕರು ಹಾಗೂ ಕಾರ್ಯಕರ್ತರ ಜೊತೆ ದ್ವೇಷ ಸಾಸದೆ ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್‍ಗೆ ಪ್ರಥಮ ಆದ್ಯತೆ ಲೋಕಸಭೆ ಚುನಾವಣೆ. ಇದಕ್ಕಾಗಿ ಕಾರ್ಯಕರ್ತರು ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ. ಸ್ಥಳೀಯವಾಗಿ ಯಾರು ಗಾಬರಿಯಾಗುವುದು, ದ್ವೇಷ ಸಾಧಿಸುವುದನ್ನು ಮಾಡಬಾರದು. ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ ತಾವು ಕಾರ್ಯಕರ್ತರಿಗೆ ಹಾಗೂ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದೇವೆ ಎಂದರು.
ಬಹಳಷ್ಟು ಕಡೆ ಕಾಂಗ್ರೆಸ್‍ಗೆ ಅಸ್ತಿತ್ವ ಇಲ್ಲ. ಅಂತಹ ಕಡೆ ಅನ್ಯಪಕ್ಷಗಳಿಂದ ಸ್ಥಳೀಯ ನಾಯಕರು ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ವಿಷಯವಾಗಿ ಕಾಂಗ್ರೆಸಿಗರು ದ್ವೇಷ ಸಾಧಿಸಬಾರದು ಎಂದು ಹೇಳಿದ್ದಾರೆ.
