ಉದಯವಾಹಿನಿ,ಚಿತ್ರದುರ್ಗ: ದಿನಾಂಕ  16 8 2023 ರಂದು ಚಿತ್ರದುರ್ಗ ನಗರದ ವಾರ್ಡ್ ನಂಬರ್ 17  ಆಶ್ರಯ ಬಡಾವಣೆ ಸುತ್ತಮುತ್ತ ಮಾನ್ಯ ಜಿಲ್ಲಾಧಿಕಾರಿಗಳವರ ನಿರ್ದೇಶನದಂತೆ ತಾಲೂಕ್ ಆರೋಗ್ಯ ಅಧಿಕಾರಿಗಳ ತಂಡ ಜನಜಾಗೃತಿ ಸಪ್ತಹ ಕಾರ್ಯಕ್ರಮವನ್ನು ನಡೆಸಿತು ಆಶ್ರಯ ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಜಾತವನ್ನ ನಡೆಸಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಶುಚಿತ್ವ ಶುದ್ಧ ನೀರಿನ ಉಪಯೋಗದ ಬಗ್ಗೆ ಮಾಹಿತಿ ಕರಪತ್ರಗಳನ್ನು ವಿತರಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಶಾಲಾ ಶಿಕ್ಷಕರಿಗೆ ಮಕ್ಕಳಿಗೆ ಎಸ್ ಡಿ ಎಮ್ ಸಿ ಸದಸ್ಯರಿಗೆ ಸಭೆಯನ್ನ ನಡೆಸಿ ತಾಲೂಕ್ ಆರೋಗ್ಯ ಅಧಿಕಾರಿ ಡಾಕ್ಟರ್ ಬಿ ವಿ ಗಿರೀಶ್ ಮಾತನಾಡಿ ಪರಿಸರ ನೈರ್ಮಲ್ಯದಿಂದ ರೋಗಗಳನ್ನು ತಡೆಗಟ್ಟಬಹುದು ಶುದ್ಧವಾದ ಕುಡಿಯುವ ನೀರಿನ ಉಪಯೋಗದಿಂದ ರೋಗಗಳನ್ನು ನಿಯಂತ್ರಿಸಬಹುದು ಕಲುಷಿತ ನೀರಿನ ಸೇವನೆಯಿಂದ ಕರುಳು ಬೇನೆ ಕಾಲರಾ ಟೈಫಾಯ್ಡ್ ಕಾಮಾಲೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಸ್ವಚ್ಛವಾದ ಕೈಗಳು ಶುದ್ಧ ಕುಡಿಯುವ ನೀರು ಹಲವಾರು ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದರು ತಾಲೂಕ್ ಆರೋಗ್ಯ ಶಿಕ್ಷಣಾಧಿಕಾರಿ ಎನ್ಎಸ್ ಮಂಜುನಾಥ್ ಮಾತನಾಡುತ್ತಾ ಜನರು ಆತಂಕ ಭಯಪಡುವುದು ಬೇಡ ಶುದ್ಧವಾದ ನೀರು ಆಹಾರ ಸೇವನೆ ಮಾಡಿ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಹಣ್ಣುಗಳನ್ನು ತಿನ್ನುವುದು ಬೇಡ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ ಬಯಲು ಮಲವಿಸರ್ಜನೆ ಮಾಡದೆ ಶೌಚಾಲಯವನ್ನು ಬಳಕೆ ಮಾಡಿ ಆಹಾರ ಪದಾರ್ಥಗಳನ್ನು ನೊಣಗಳಿಂದ ಸಂರಕ್ಷಣೆ ಮಾಡಿಕೊಳ್ಳಿ ಮೆದು ಆಹಾರ ಗಂಜಿಮೆದು ಆಹಾರ ಗಂಜಿಮೆದು ಆಹಾರ ಗಂಜಿ, ಮಜ್ಜಿಗೆ ಎಳನೀರು ಹೇರಳವಾಗಿ ಸೇವನೆ ಮಾಡಿ ತಮ್ಮ ಮತ್ತು ಇತರರ ಆರೋಗ್ಯ ಕಾಪಾಡುವಲ್ಲಿ ಜವಾಬ್ದಾರಿ ವಹಿಸುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ  ಎಂದರು ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಅವರು ಮಕ್ಕಳಿಗೆ ಶಾಲಾ ಶಿಕ್ಷಕರಿಗೆ ಎಸ್ ಡಿ ಎಮ್ ಸಿ ಸದಸ್ಯರಿಗೆ ಕೈ ತೊಳಿಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು ಜನಜಾಗೃತಿ ಸಪ್ತಹದಲ್ಲಿ ಮಾರುತಿ ನಗರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಯಶಸ್ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ ಶ್ರೀಧರ್ ಮಧುಸೂದನ್ ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ ಮಾರುತಿ ನಗರ ಆರೋಗ್ಯ ಕೇಂದ್ರದ ಎಲ್ಲಾ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕಿಯರು ಶಾಲಾ ಶಿಕ್ಷಕರಾದ ರುದ್ರಪ್ಪ ನಿರ್ಮಲ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!