ಉದಯವಾಹಿನಿ,ದೇವದುರ್ಗ : ಬ್ರಿಟಿಷರ ದಾಸ್ಯದಲ್ಲಿ ಸಿಲುಕಿದ  ಭಾರತಮಾತೆಯನ್ನು ಜೀವದ ಹಂಗು ತೊರೆದು ತಮ್ಮ ಸುಖ ಸಂತೋಷವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವ ಸುದಿನವಿದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾ,  ಅಪ್ಪನೊಂದಿಗಿದ್ದ ಭಗತಸಿಂಗ್  ಗದ್ದೆಯಲ್ಲಿ ಭತ್ತ ಬೆಳೆಯುವಂತೆ ಬಂದುಕು ನೆಟ್ಟು ಬಂದುಕು ಬೆಳೆಯಲಾಗುವದಿಲ್ಲವೇ ಎಂದು ಪ್ರಶ್ನಿಸಿದನು. ಅದನ್ನು ಕೇಳಿದ ತಂದೆಗೆ ಆಶ್ಚರ್ಯವಾಯತು… ಆಗ ಮಗನಿಗೆ ಬಂದುಕು ಏಕೆ ಬೆಳೆಯಬೇಕು ಎಂದು ಮರುಪ್ರಶ್ನಿಸಿದಾಗ ತಕ್ಕಡಿ ಹಿಡಿದು ಬಂದ ಬ್ರಿಟಿಷ್ ಕಮಂಗಿಗಳನ್ನು ಇಲ್ಲಿಂದ ಓಡಿಸಲು ಅದರ ಅವಶ್ಯಕತೆ ಇದೆ ಎನ್ನುವ    ಬಾಲಕ ಭಗತಸಿಂಗನ ಮಾತು  ನಮಗೆಲ್ಲ ಸ್ಪೂರ್ತಿಯ ನುಡಿಯಾಗಿದೆ ಎಂದು ನೀಲಕಂಠ ಮಳಿಮಠ ಸಹಶಿಕ್ಷಕರು  ಉಪನ್ಯಾಸ ಮಾಡುತ್ತ,  ಸ್ವಾತಂತ್ರ್ಯ ಬಂದ ಬಗೆಯನ್ನು ವಿವರಿಸಿದರು. ಶ್ರೀ ಮುರುಘೇಂದ್ರ ಸ್ವಾಮಿ ವಿರಕ್ತಮಠ ಇವರ ಸಾನಿಧ್ಯದ ಅಡಿಯಲ್ಲಿ ಸರ್ಕಾರಿ ಪ್ರೌಢ ಶಾಲೆ ಮಸರಕಲ್ಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವು  ಪ್ರತಿವರ್ಷದಂತೆ ಈ ವರ್ಷವೂ ಕೂಡಾ ದಿ. ಶಂಕ್ರಮ್ಮ ಮಾಲಿಪಾಟೀಲ್ ಮಸರಕಲ್ ಅವರ ಸ್ಮರಣಾರ್ಥ ವಾಗಿ  SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಗಳಿಸಿದ ವಿದ್ಯಾರ್ಥಿನಿ ಐಶ್ವರ್ಯ ತಂದೆ ಮರಸಣ್ಣ ಇವರಿಗೆ ೧೦೦೦೦-೦೦₹.ಗಳು ನಗದು  ಪುರಸ್ಕಾರವನ್ನು  ವೈಜನಾಥ ಪಾಟೀಲ್ ಆಲ್ಕೋಡ ಅವರ ಮಗನಾದ ಸುನೀಲಕುಮಾರ ಮಾಲಿ ಪಾಟೀಲ ನೀಡಿ ಗೌರವಿಸಿದರು
 ದಿ. ರಾಜಶೇಖರ ಬಳೆ ಸಾಹುಕಾರ್ ಮಸರಕಲ ಇವರ ಸ್ಮರಣಾರ್ಥ ಅವರ ಮಗನಾದ, ಲಿಂಗಾನಂದ ಬಳೆ ಅವರ ಮಾವನವರಾದ ವಿಜಯಕುಮಾರ್ ಅತ್ತನೂರು  ಇವರು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಶಿವಾನಂದ ತಂದೆ ಬಸವರಾಜನಿಗೆ ೨೧೦೦-೦೦₹ ಗಳು ನಗದು ಪುರಸ್ಕಾರ ನೀಡಿ ಗೌರವಿಸಿದರು.
  ದ್ವಿತೀಯ ಸ್ಥಾನ  ಗಳಿಸಿದ ಶ್ರೀಕಾಂತ ತಂದೆ ಬೂದೆಪ್ಪ ಇವರಿಗೆ  ದಿ.ರಾಮಲಿಂಗಯ್ಯ ಸ್ವಾಮಿ ಹಿರೇಮಠ ಸ್ಮರಣಾರ್ಥ ಅವರ ಸುಪುತ್ರಿಯಾದ ಶ್ರೀ ಮತಿ ಶಿವಕರ್ಣಮ್ಮ ಮುಖ್ಯ ಲೆಕ್ಕಿಗರು ಖಜಾನೆ ಇಲಾಖೆ ಇವರ ಪರವಾಗಿ ಅವರ ಸಹೋದರ ಚಂದ್ರಕಾಂತ ಹಿರೇಮಠ ೨೦೦೦-೦೦ ₹   ನಗದು ರೂಪದ ಮೊತ್ತ ಹಾಗೂ ಪ್ರಶಸ್ತಿ ಫಲಕ ಕೊಟ್ಟು ಗೌರವಿಸಿದರು. ಮಹಾದೇವ ಕುಳಲಿ  ಅವರಿಂದ ಕೊಡಮಾಡುವ ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮದಿಹಾ, ಸ್ವಾತಿ, ಬಸವರಾಜ  ಈ ಮೂವರಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ  ಕೊಡುವ  ತಲಾ ೫೦೦₹ ನಗದು ಬಹುಮಾನವನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಲ್ಲಪ್ಪ ಹಿರೆಮೇಟಿ, ಗ್ರಾ. ಪಂ. ಸದಸ್ಯರಾದ ಮಹೇಶನಾಯಕ, ಹಾಜಿಸಾಬ ಮುಲ್ಲಾ ವಿತರಿಸಿದರು.  ಕಾಶಿಮ್ ಅಲಿ ಹಿಂದಿ ಶಿಕ್ಷಕರು ನೀಡುವ ೧೦೦೦-೦೦ ನಗದು ಬಹುಮಾನ ಶಿವಾನಂದ, ಶ್ರೀಕಾಂತ ಮತ್ತು ರೇವಣಸಿದ್ದಯ್ಯ ಇವರು ಅಕ್ಬರಸಾಬ, ಶಿಕ್ಷಕರಾದ  ರವಿಶಂಕರ್, ಮೈನುದ್ದೀನ್ ಇವರಿಂದ ಪಡೆದುಕೊಂಡರು.
ಡಾ.ರಾಧಾಕೃಷ್ಣನ್ ಚಿತ್ರ ತೋರಿಸಿ ಸಾಮಾನ್ಯ ಶಿಕ್ಷಕರಾಗಿದ್ದ ಅವರು ಈ ದೇಶದ ರಾಷ್ಟ್ರಪತಿಯಾದ ರೀತಿ ಸ್ಮರಿಸಿಕೊಂಡು “ಇವರೇರಿರುವ ಎತ್ತರಕ್ಕೆ ನೀನೇಬಲ್ಲೆಯಾ …..?” ಎಂದು ಮಕ್ಕಳಿಗೆ ಪ್ರಶ್ನಿಸುತ್ತಾ.. ಅಬ್ದುಲ್ ಕಲಾಂ ಭಾವ ಚಿತ್ರ ತೋರಿಸಿ, ದೇಶದ ಕ್ಷಿಪಣಿಯ ಸೃಷ್ಟಿಕಾರ ಆದರೂ, ಅವರು ಸ್ವರ್ಗಸ್ಥರಾದಾಗ ಅವರಲ್ಲಿದ್ದು ಒಂದು ಸುಟಕೇಶ್ ಅದರಲ್ಲಿ ೨ ಸ್ಯೂಟ, ೪ ಜೊತೆ ಪ್ಯಾಂಟ ಮತ್ತು ಒಂದು ಮನೆಯೊಂದಿಗೆ ಬದುಕಿರುವ ಅವರು ಎಲ್ಲವನ್ನು ದೇಶದ ಉನ್ನತಿಗೆ ದಾನ ಮಾಡಿದ್ದನ್ನು ನೆನಪಿಸಿಕೊಂಡು “ಇವರಂತೆ ಬೆಳೆದು ಇಂತಹ ಸಮಾಜಮುಖಿ ಕಾರ್ಯಕ್ಕೆ ನಿನ್ನ ಬದುಕು ಮೀಸಲು ಇರಿಸುವೆಯಾ? ಎನ್ನತ್ತಾ  ಇವರಂತೆ ಆದರ್ಶರಾಗಿ ಬಾಳಲು  ಹೇಳುತ್ತಾ, ಮತ್ತೇ ಅತಿ ಹೆಚ್ಚು ಗಳಿಸಿದ ವಿಧ್ಯಾರ್ಥಿಗಳ ಭಾವಚಿತ್ರ ತೋರಿಸಿ “ಇವರಂತೆ ಅತಿ ಹೆಚ್ಚು ಅಂಕ ಗಳಿಸಿ ಎಲ್ಲರ ಮುಂದೆ ಬಹುಮಾನ ಸ್ವೀಕರಿಸಿವೀರಾ..?ಎಂದು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಗುರುಗಳಾದ ಎ ವಿ ಬಸವರಾಜರವರು ಮಕ್ಕಳನ್ನು ಹುರಿದುಂಬಿಸಿದ್ದಿದು ಈ ದಿನದ ವಿಶೇಷ ವಾಗಿತ್ತು. ಪ್ರೌಢ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಪಾಟೀಲರು ಮಾತನಾಡಿ ಅಸಾಮಾನ್ಯ ಸಾಧನೆ ಮಾಡಿದ ಮಕ್ಕಳಗೆ ವಿಭಿನ್ನ ರೀತಿಯ ಸತ್ಕಾರಗಳು ಮುಂದಿನ ವರ್ಷದಿಂದ ಇರುತ್ತವೆ ಎಂದಾಗ,  ಮಕ್ಕಳ ಮನಸಿನಲ್ಲಿ ನೂರಾರು ಕನಸು ಹೊತ್ತುಕೊಂಡು  ಯಶಸ್ಸು ಸಾಧಿಸಲು ಮುಂದಡಿ ಇಟ್ಟದ್ದು ಸ್ಮರಣಾರ್ಹ. ಶಿಕ್ಷಕರಾದ ಶಕೀಲ್ ಅಹ್ಮದ,  ನಾಗರತ್ನ , ಬಸವರಾಜ ಮೇತ್ರಿ, ಶಾಂತಪ್ಪ, ಗ್ರಾಮಸ್ಥರಾದ ಭೀಮಣ್ಣ ಸಾಹುಕಾರ್, ಬೂದೆಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!