
ಉದಯವಾಹಿನಿ,ಅಫಜಲಪುರ: ವರ್ಷದ 12 ತಿಂಗಳು ಒಂದಿಲ್ಲೊಂದು ಹಬ್ಬ, ಹರಿದಿನಗಳು ಬರುತ್ತವೆ ಆದರೆ ಸಮಸ್ತ ಭಾರತೀಯರಿಗೆ ಸ್ವಾತಂತ್ರ ಸಂಭ್ರಮಕ್ಕಿಂತ ದೊಡ್ಡ ಹಬ್ಬವಿಲ್ಲ ಎಂದು ಡಾ.ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.ಅವರು ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ 77ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೇರವೇರಿಸಿ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಲಕ್ಷಾಂತರ ದೇಶಭಕ್ತರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅವರೆಲ್ಲರ ತ್ಯಾಗ ಬಲಿದಾನಗಳಿಂದಾಗಿ ನಾವೆಲ್ಲ ಇಂದು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದೇವೆ. ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗಿ ಬದುಕು ಹಾಳು ಮಾಡಿಕೊಳ್ಳದೆ ತ್ಯಾಗ ಬಲಿದಾನಗಳಿಂದ ಸಿಕ್ಕ
ಸ್ವಾತಂತ್ರವನ್ನು ರಕ್ಷಣೆ ಮಾಡುವುದರ ಜೊತೆಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಮುಖ್ಯಗುರು ಚನ್ನಮಲ್ಲಪ್ಪ ಮಂಗಳೂರ ಮಾತನಾಡುತ್ತಾ ಬಡದಾಳ ಮಠದ ಪೂಜ್ಯರು ಕೇವಲ ಮಠದಲ್ಲಿ ಕುಳಿತುಕೊಳ್ಳದೆ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯಾಗಿದ್ದು ಈ ಶಾಲೆಯ ಮಕ್ಕಳ 10ನೇ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625ಅಂಕ ಪಡೆದು ಪಾಸಾದರೆ ಆ ವಿದ್ಯಾರ್ಥಿಗೆ ವಯಕ್ತಿಕವಾಗಿ 25ಸಾವಿರ ಬಹುಮಾನ ನೀಡುವುದಾಗಿ ತಿಳಿಸಿದರು. ಬಳಿಕ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಶ್ರೀಕಾಂತ ನಿಂಬಾಳ, ರಾಜು ಸಾಣಾಕ್, ರೇವಣಸಿದ್ದ ಖೈರಾಟ್, ಕಲ್ಲಪ್ಪ ಚಾಂಬಾರ, ಗೋರಖನಾಥ ಮಳಗಿ, ಶಿವಶರಣ ಡಬ್ಬಿ, ಮಲ್ಲಿನಾಥ ಅತನೂರ, ರಾಜಶೇಖರ ಜಮಾಣಿ, ಗಿರೀಶ ಉಡಗಿ, ಶ್ರೀಶೈಲ್ ಬಿಜಾಪೂರೆ, ನಾಗೇಶ ಭತ್ತಾ, ಪರಮೇಶ್ವರ ಶಿರೂರ, ಸಿದ್ದರಾಮ ಮಾಶಾಳ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಇದ್ದರು.
