ಉದಯವಾಹಿನಿ, ನವದೆಹಲಿ: ಮೆಕ್ಡೊನಾಲ್ಡ್ಸ್ ನಂತರ ಮತ್ತೊಂದು ಫಾಸ್ಟ್ ಫುಡ್ ದೈತ್ಯ, ಬರ್ಗರ್ ಕಿಂಗ್ ಭಾರತದಲ್ಲಿ ತನ್ನ ಆಹಾರ ಪದಾರ್ಥಗಳ ಮೆನುವಿನಿಂದ ಟೊಮೆಟೊ ರದ್ದುಗೊಳಿಸಿದೆ ಎಂದು ವರದಿ ಹೇಳಿದೆ.
ತರಕಾರಿಗಳ ಬೆಲೆ ಗಗನಕ್ಕೇರುತ್ತಲೇ ಇರುವುದರಿಂದ, ಬರ್ಗರ್ ಕಿಂಗ್ ತನ್ನ ಆಹಾರ ಪದಾರ್ಥಗಳಲ್ಲಿ ಟೊಮೆಟೊ ನೀಡುವುದನ್ನು ನಿಲ್ಲಿಸಿದೆ. ಹೀಗಾಗಿಯೇ ತನ್ನ ಆಹಾರ ಪದಾರ್ಥದ ಮೆನುವಿನಲ್ಲಿ ಟಮೋಟೊ ಇರುವ ಆಹಾರ ಪದಾರ್ಥ ಕೈಬಿಟ್ಟಿದೆ ಎಂದು ಹೇಳಲಾಗಿದೆ.
“ಟೊಮೆಟೊಗಳಿಗೂ ಸಹ ರಜೆ ಬೇಕು… ನಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ಎರಡು ಬರ್ಗರ್ ಕಿಂಗ್ ಇಂಡಿಯಾ ಔಟ್‌ಲೆಟ್‌ಗಳಲ್ಲಿ ಅಂಟಿಸಲಾಗಿದೆ. ಬರ್ಗರ್ ಕಿಂಗ್ ಇಂಡಿಯಾದ ವೆಬ್‌ಸೈಟ್‌ನ ಬೆಂಬಲ ಪುಟದಲ್ಲಿ ಬಳಕೆದಾರರು ಬರ್ಗರ್‌ಗಳಲ್ಲಿ ಟೊಮೆಟೊ ಇಲ್ಲದಿರುವುದನ್ನು ಸೂಚಿಸಿದ ನಂತರ, ದೇಶದಲ್ಲಿ ೪೦೦ ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ ಕಂಪನಿಯು ಗ್ರಾಹಕರಿಂದ ತಾಳ್ಮೆಯನ್ನು ಬಯಿಸಿದೆ.
ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಬರ್ಗರ್‌ಗಳಲ್ಲಿ ಟೊಮೆಟೊಗಳು ಇನ್ನು ಮುಂದೆ ಇರುವುದಿಲ್ಲ ಎಂದು ಬರ್ಗರ್ ಕಿಂಗ್ ಗ್ರಾಹಕರಿಗೆ ತಿಳಿಸಿದೆ.
ಕಳೆದ ತಿಂಗಳು, ಮೆಕ್‌ಡೊನಾಲ್ಡ್ ಇಂಡಿಯಾ ಕೂಡ ಟೊಮೆಟೊ ಬೆಲೆ ಅತ್ಯಧಿಕವಾಗಿರುವ ಹಿನ್ನೆಲೆಯಲ್ಲಿ ಟೊಮೆಟೊ ಇರುವ ಆಹಾರ ಪದಾರ್ಥಗಳನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ನಾವು ಗ್ರಾಹಕರ ಮೇಲೆ ಹೊರೆ ಹಾಕಲು ಇಷ್ಟ ಪಡುವುದಿಲ್ಲ ಎಂದು ಹೇಳಿ, ಟೊಮೆಟೊ ಬಳಸುವ ಆಹಾರ ಪದಾರ್ಥಗಳ ಪಟ್ಟಿಯನ್ನು ಕೈಬಿಟ್ಟಿತ್ತು.

Leave a Reply

Your email address will not be published. Required fields are marked *

error: Content is protected !!