ಉದಯವಾಹಿನಿ, ಲಾಹೋರ್,: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಧರ್ಮಗಳ ಅನುಯಾಯಿ ಹಾಗೂ ಪ್ರಾರ್ಥನಾಲಯಗಳ ಮೇಲಿನ ದಾಳಿ ಮತ್ತೆ ಮುಂದುವರೆದಿದೆ. ಕ್ರಿಶ್ಚಿಯನ್ ಕುಟುಂಬವೊಂದು ಧರ್ಮನಿಂದನೆ ಎಸಗಿದೆ ಎಂಬ ಆರೋಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳ ಗುಂಪೊಂದು ಪೂರ್ವ ಪಾಕಿಸ್ತಾನದಲ್ಲಿ ನಾಲ್ಕಕ್ಕೂ ಹೆಚ್ಚು ಚರ್ಚ್‌ಗಳಿಗೆ ಬೆಂಕಿಹಚ್ಚಿ ದಾಂಧಲೆ ನಡೆಸಿದ ಘಟನೆ ಪಂಜಾಬ್‌ನ ಪೂರ್ವ ಪ್ರಾಂತ್ಯದ ಜರನ್‌ವಾಲಾದಲ್ಲಿ ನಡೆದಿದೆ. ಮೂಲಗಳ ಪ್ರಕಾರ ನಾಲ್ಕಕ್ಕೂ ಹೆಚ್ಚು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ಸ್ಥಳೀಯ ಕ್ರೈಸ್ತ ಕುಟುಂಬದ ಪ್ರಕಾರ ಚರ್ಚ್‌ಗೆ ಸಂಬಂಧಪಟ್ಟ ೧೨ಕ್ಕೂ ಹೆಚ್ಚು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಆದರೆ ಅತ್ತ ಚರ್ಚ್‌ಗಳ ಮೇಲೆ ದಾಳಿ ನಡೆದಿದ್ದರೆ ಇತ್ತ ಧರ್ಮನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಸಮುದಾಯಕ್ಕೆ ಸೇರಿದ ಇಬ್ಬರು ಪುರುಷರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುರಾನ್‌ನ ಪುಟುಗಳನ್ನು ಕೆಂಪು ಬಣ್ಣದಲ್ಲಿ ಬರೆದಿರುವ ಅವಹೇಳನಕಾರಿ ಹೇಳಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
