
ಉದಯವಾಹಿನಿ,ಪೀಣ್ಯ ದಾಸರಹಳ್ಳಿ : ಕ್ಷೇತ್ರದ ದಾಸರಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಎಸ್ ಮುನಿರಾಜು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸಲ್ಲಿಸಿ ಶಿಕ್ಷಕ ಶಿಕ್ಷಕಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ನಂತರ ಅವರು ಸ್ವಾತಂತ್ರ್ಯಕ್ಕಾಗಿ ಸಾವಿರಾರು ದೇಶ ಭಕ್ತರು ತಮ್ಮ ತ್ಯಾಗ ಬಲಿದಾನದ ಪ್ರತಿಫಲದಿಂದ ಬ್ರಿಟಿಷರನ್ನು ಹೋರದೊಡಿಸಿದ ಕೀರ್ತಿ ಎಲ್ಲಾ ಮಹಾನ್ ಹೋರಾಟಗಾರರಿಗೆ ಗೌರವಪೂರ್ವಕವಾಗಿ ನಮನಗಳನ್ನು ಸಲ್ಲಿಸು ಪವಿತ್ರ ದಿನ ಸ್ವತಂತ್ರ್ಯೋವ ದಿನವೇ ಭಾರತೀಯರಿಗೆ ದೊಡ್ಡ ಹಬ್ಬ ಎಂದು ಶಾಸಕ ಎಸ್ ಮುನಿರಾಜು ಮಕ್ಕಳನ್ನು ಉದ್ದೇಶಿಸಿ ಮಾತಾಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಉಮಾದೇವಿ ನಾಗರಾಜ್, ಎಸ್.ಡಿ.ಎಂ.ಸಿ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕರು ಇದ್ದರು
