
ಉದಯವಾಹಿನಿ, ಶಿಡ್ಲಘಟ್ಟ: ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳು ಗ್ರಾಮ ಪಂಚಾಯಿತಿಯಿಂದ ಸಿಗುತ್ತವೆ ಎಂಬ ನಂಬಿಕೆ ಹುಸಿಯಾಗಿದೆ. ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಸುಮಾರು 20 ದಿನಗಳ ಹಿಂದೆ ನೀರಿಲ್ಲದೆ ಪರದಾಡಿ ನಂತರ ಕುಂದುಕೊರತೆಗಳನ್ನು ಸಭೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಹರ ಸಾಹಸ ಮಾಡಿ ನೀರು ಪಡೆದೆವು, 15 ದಿನಗಳಿಂದ ಗ್ರಾಮದ ಮುಖ್ಯರಸ್ತೆಯ ಬೀದಿ ದೀಪಗಳಿಲ್ಲದೆ ಕಾಡುಪ್ರಾಣಿಗಳು ಬದುಕುವಂತಹ ರೀತಿಯಲ್ಲಿ ಮನುಷ್ಯರು ಬದುಕುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಜನರು ಓಡಾಡಲು ಭಯಬೀತರಾಗಿದ್ದಾರೆ. ಇನ್ನು ವಯಸ್ಸಾದವರಂತೂ ಮನೆಯಿಂದ ಹೊರಗೆ ಬರುವ ಹಾಗೆ ಇಲ್ಲ ಎಂದು ಊರಿನ ಯುವಕ ಸಿ ಎಲ್ ಸುನಿಲ್ ಆಕ್ರೋಶ ಹೊರಹಾಕಿದರು.ಇನ್ನು ಈ ವಿಚಾರವನ್ನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಜ್ರೇಶ್ ಕುಮಾರ್ ಅವರಿಗೆ ಎಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಅವರ ಮೇಲಾಧಿಕಾರಿ ಇ.ಒ ಮುನಿರಾಜ್ ಹಾಗೂ ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರಿಗೂ ವಾಟ್ಸಾಪ್ ಮೂಲಕ ವಿಡಿಯೋ ಕಳಿಸಿ ಮಾಹಿತಿ ತಿಳಿಸಿದರು ಇಲ್ಲಿಯವರೆಗೂ ಪ್ರಯೋಜನವಾಗಲಿಲ್ಲ ಎಂದು ಗ್ರಾಮದ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯು ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಚಿಕ್ಕತೇಕಹಳ್ಳಿಯ ಗ್ರಾಮಸ್ಥರು ಗ್ರಾಮದ ಮೂಲಭೂತ ಸೌಕರ್ಯಗಳಿಗಾಗಿ ತಾಲೂಕಿನ ಪ್ರಥಮ ಪ್ರಜೆ ಶಾಸಕರ ಬಳಿ ಹೋದರೆ ಪರಿಹಾರ ಸಿಗುವುದೆ ಕಾದು ನೋಡಬೇಕು.
ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಬೀದಿ ದೀಪಗಳ ಬಗ್ಗೆ ಹಲವು ಬಾರಿ ಮನವಿ ಮಾಡಿದರು. ಅವರು ಇಂದು, ನಾಳೆ, ನಾಡಿದ್ದು, ಲೈಟು ರಿಪೇರಿಗೆ ಹೋಗಿದೆ, ಬಂದ ತಕ್ಷಣ ಆಕುತ್ತೇವೆ ಎಂಬ ಸಬೂಬಗಳು ಹೇಳಿದರೇ ವಿನಃ ಕೆಲಸ ಅಂತೂ ಆಗಲಿಲ್ಲ. – ಸಿ. ವೆಂಕಟೇಶಪ್ಪ, ಗಾಮ ಪಂಚಾಯತಿ ಸದಸ್ಯ
ಸಾರ್ವಜನಿಕ ರಿಂದ ಬೀದಿ ದೀಪಗಳ ರಿಪೇರಿಗೆ ಮನವಿ ಬಂದಿದ್ದು ಸದ್ಯ ಅವುಗಳನ್ನು ರಿಪೇರಿಗೆ ಕಳಿಸಲಾಗಿದೆ ಅವುಗಳು ಬಂದ ತಕ್ಷಣ ಹಾಕುತ್ತೇವೆ. – ವಜ್ರೇಶ್ ಕುಮಾರ್, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ.
