ಉದಯವಾಹಿನಿ,ದೇವರಹಿಪ್ಪರಗಿ: ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ಗ್ರಾಹಕರು ಮಂಗಳವಾರ ದಾಂಧಲೆ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ ಘಟನೆ ಪಟ್ಟಣದಲ್ಲಿ ನಡೆದಿತ್ತು. ಬುದುವಾರದಂದು ಶ್ರೀಶೈಲ್ ಮೇಟಗಾರ ದೂರಿನ ಅನ್ವಯ ಪಟ್ಟಣದ ಮನಿಯಾರ್ ಎಂಟರ್ಪ್ರೈಸಸ್ ಲಕ್ಕಿ ಡ್ರಾ ಮಾಲೀಕರಾದ 5ಜನರ ಮೇಲೆ ಐಪಿಸಿ ಸೆಕ್ಷನ್ 420 ಕಲಂ ಪ್ರಕರಣ ದಾಖಲಾಗಿದೆ.ಪಟ್ಟಣದಲ್ಲಿ ಮಂಗಳವಾರದಂದು ಮನಿಯಾರ್ ಎಂಟರ್ಪ್ರೈಸಸ್ ಲಕ್ಕಿ ಡ್ರಾ ಹೆಸರಿನಲ್ಲಿ ಶ್ರೀ ಮಡಿವಾಳೇಶ್ವರ ದೇವಸ್ಥಾನದ ಎದುರುಗಡೆ ಖುಲ್ಲಾ ಪ್ಲಾಟಿನಲ್ಲಿ ಪ್ರತಿಯೊಬ್ಬ ಗ್ರಾಹಕನಿಗೆ ತಲಾ 600 ರೂಪಾಯಿ ಅಂತೆ ಸುಮಾರು 5000ಕ್ಕೂ ಹೆಚ್ಚಿನ ಗ್ರಾಹಕರಿಂದ ಹಣ ಸಂಗ್ರಹಿಸದ್ದಾರೆ,ದಿ.07-07-2023 ರಂದು ಡ್ರಾ ಮಾಡಬೇಕಾಗಿತ್ತು, ಹಲವು ವಾಹನಗಳು ತರಬೇಕಾದ ಕಾರಣ ತಡವಾಗಿ ದಿ.15-07-2023ರಂದು ಡ್ರಾ ಮಾಡಲಾಗುವುದು ಎಂದು ತಿಳಿಸಿದ ಪರಿಣಾಮ ಸಾವಿರಾರು ಜನ ಕೂಡಿದ್ದರು.ನಂತರ ಕೇವಲ ತಮಗೆ ಬೇಕಾದವರಿಗೆ ದೊಡ್ಡ ಬಹುಮಾನದ ಕಾರ್ಡ್ ಕೊಟ್ಟಿದ್ದಾರೆ ಹಾಗೂ ಇರುವ ಸಾಮಾನುಗಳಲ್ಲಿ ಸುಮಾರು 100 ಜನರಿಗೆ ಬಹುಮಾನ ಘೋಷಿಸಲಾಗುವುದು ಎಂದು ಹೇಳಿದ ಕಾರಣ , ಕೆಲವರು ತಕರಾರು ತೆಗೆದಾಗ ಜಗಳ ಆರಂಭವಾಗಿದೆ. ಲಕ್ಕಿ ಡ್ರಾ ಮಾಡುವ ಸಂಸ್ಥೆಯ ಮಾಲಿಕರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಗದ್ದಲ ಮಾಡಿದ ಕಾರಣ ಪೊಲೀಸರು ಲಗು ಲಾಟಿಚಾರ್ಜ್ ಮಾಡಿ ತಿಳಿಗೊಳಿಸಲಾಯಿತು.ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ತಾಳಿಕೋಟಿ ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಪಟ್ಟಣ ಸೇರಿದಂತೆ ಸುಮಾರು 5000ಕ್ಕೂ ಹೆಚ್ಚು ಜನ ಮನಿಯಾರ್ ಲಕ್ಕಿ ಡ್ರಾ ಕೂಪನ್ ಹಿಡಿದು ಆಗಮಿಸಿದ್ದ ಜನರು ಪೊಲೀಸ್ ಠಾಣೆಯ ಮುಂದೆ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಆದರೆ, ಈವರೆಗೆ  ಶ್ರೀಶೈಲ ಮೇಟಗಾರ ಬಿಟ್ಟರೆ ಯಾವ ಗ್ರಾಹಕರು ಪೊಲೀಸರಿಗೆ ದೂರು ನೀಡಿಲ್ಲ. ಪಿಎಸ್ಐ ಆರ್ ವೈ ಬೀಳಗಿ  ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
*ಬಂಪರ್ ಡ್ರಾ ಹೆಸರಿನಲ್ಲಿ ಬಾರೀ ಮೋಸ ಗ್ರಾಹಕರ ಆರೋಪ*
ಮಣಿಯಾರ್ ಲಕ್ಕಿ ಬಂಪರ್ ಡ್ರಾ ಮಾಲೀಕರು ಲಾಟರಿ ಟಿಕೆಟ್ ಗೆ 600 ರೂಪಾಯಿ ಹಣ ಪಡೆದು  ಲಾಟರಿ ಟಿಕೆಟ್ ಖರೀಧಿ ಮಾಡಿರೋ ಸುಮಾರು 5000 ಕ್ಕೂ ಆಧಿಕ ಜನರು ಮನಿಯಾರ ಎಂಟರ್ ಪ್ರೈಸಿಸ್ ನವರಿಂದ ಬಂಪರ್ ಡ್ರಾ ಲಾಟರಿ ನೋಡಲು ಬಂದಿದ್ದರು. ಒಟ್ಟು 100 ಬಹುಮಾನಗಳನ್ನು ನೀಡೊದಾಗಿ ಹೇಳಿ ಡ್ರಾ ಮಾಡದೇ ಜನರಿಗೆ ನಂಬಿಸಿ ಮೋಸ ಮಾಡಿದ್ದಾರೆ. ಪ್ರಥಮ ಬಹುಮಾನ ಒಂದು ಎರ್ಟಿಗಾ ಕಾರ್ ಸೇರಿದಂತೆ ಹಲವು ಬಹುಮಾನಗಳು ಈ ರೀತಿಯಾಗಿ ಒಂದು ಸಿಎನ್ ಜಿ ಆಟೋ. ಒಂದು ಟಂಟಂ,ಒಂದು ರಾಯಲ್ ಎನ್ ಫೀಲ್ಡ್ ಬೈಕ್, 2 ಹೋಂಡಾ ಶೈನ್ ಬೈಕ್, 2 ಸ್ಲ್ಪೇಂಡರ್ ಬೈಕ್, 10ಹೆಚ್ ಎಫ್ ಡೀಲಕ್ಸ್, 2 ಟಿವಿಎಸ್ ಎಕ್ಸೆಲ್,  2 ಟಿವಿಎಸ್ ಬೈಕ್, 2 ಎಲೆಕ್ಟ್ರಿಕ್ ಬೈಕ್, 20 ಪ್ರಿಜ್, 20 ಎಲ್ಇಡಿ ಟಿವಿ 20 ಕೂಲರ್, 10 ಗ್ರಾಂ 3 ಗೋಲ್ಡ್ ಬಿಸ್ಕಟ್ , ವಿವೋ ಮೊಬೈಲ್ 10, 3 ಸೈಕಲ್ ಬಹುಮಾಮನ ನೀಡೋದಾಗಿ ಭರವಸೆ ನೀಡಿ ವಂಚಿಸಿದ್ದಾರೆ.
*ಮಾಲೀಕರ ಮೇಲೆ ಪ್ರಕರಣ ದಾಖಲು* 
 ಮನಿಯಾರ್ ಎಂಟರ್ ಪ್ರೈಸಿಸ್ ನವರು, 1)ಇಸ್ಮಾಯಿಲ್ ಅಬೂಬಕರ ಮನಿಯಾರ್ ,2)ಶಹನವಾಜ್ ಇಸ್ಮಾಯಿಲ್ ಮನಿಯಾರ್ ,3)ಅಬ್ದುಲ್ ರಜಾಕ್ ಶಮ್ಸುದ್ದೀನ್ ಮನಿಯಾರ್ ,4)ಗೌಸಮುದಿನ್ ಶಮ್ಸುದ್ದೀನ್ ಮನಿಯಾರ್, ಹಾಗೂ 5)ಮಹ್ಮದ ಇಸ್ಮಾಯಿಲ್ ಮನಿಯಾರ್ ಇವರ ಮೇಲೆ ಪ್ರಕರಣ ದಾಖಲಾಗಿದೆ.
*ಮುಗಿಯದ ಲಕ್ಕಿ ಡ್ರಾ ಗದ್ದಲ*
ಮಳೆ ನಿಂತರು ಮಳೆ ಹನಿ ನಿಲ್ಲದು ಎನ್ನುವ ಹಾಗೆ ಲಕ್ಕಿ ಡ್ರಾ ಪರಿಸ್ಥಿತಿಯಾಗಿದೆ, ಲಕ್ಕಿ ಡ್ರಾ ಸಲುವಾಗಿ ಹಲವರು ಏಜೆಂಟರು ಕಾರ್ಡುಗಳನ್ನು ಮಾರಿದ್ದು, ಡ್ರಾ ಮಾಡದ ಕಾರಣ ಗ್ರಾಹಕರಿಂದ ಏಜೆಂಟರಿಗೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಹಾಗೂ ಹಲವಾರು ಜನ ಗ್ರಾಹಕರು ಡ್ರಾಗೆ ತಂದ ಸಾಮಾನುಗಳನ್ನು ಕದ್ದು ಒಯಿದಿದ್ದಾರೆ ಎನ್ನುವುದು ಮಾಲೀಕರ ಆರೋಪವಾಗಿದೆ. ಇದರಿಂದ ಇನ್ನೂ ಇದರ ಸ್ವರೂಪ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದು ಕಾದ ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!