ಉದಯವಾಹಿನಿ, ಲಂಡನ್, : ಎರಡು ಬಾರಿಯ ವಿಶ್ವ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆಂಥೋನಿ ಜೋಶುವಾ ಅವರು ಕಳೆದ ರಾತ್ರಿನಡೆದ ಸ್ಪರ್ಧೆಯಲ್ಲಿ ರಾಬರ್ಟ್ ಹೆಲೆನಿಯಸ್ ವಿರುದ್ಧ ಗೆದ್ದಿದ್ದಾರೆ. ಪ್ರೇಕ್ಷಕರನ್ನು ಕುತೂಹಲ ರೀತಿಯಲ್ಲಿ ಕೆರಳಿಸಿದ ಆಂಥೋನಿ ಎರಡನೇ ಬಾರಿಗೆ ರಾಬರ್ಟ್ ವಿರುದ್ದ ಗೆದ್ದಿದ್ದಾರೆ ಮತ್ತು ಭವಿಷ್ಯದ ಪಂದ್ಯಕ್ಕಾಗಿ ಕಾತರತೆ ವ್ಯಕ್ತಪಡಿಸಿದ್ದಾರೆ.
ಜಿದ್ದಾ ಜಿದ್ದಿ ನಿಂದ ಕೂಡಿದ ಸ್ಪರ್ಧೆಯ ಏಳು ಸುತ್ತಿನಲ್ಲಿ ರಾಬರ್ಟ್ ಹೆಲೆನಿಯಸ್‍ನನ್ನು ನೆಲಕುರುಳಿಸಿ ಅದ್ಭುತವಾದ ಮುಕ್ತಾಯ ಮಾಡಿದರು ಮತ್ತೆ ಈಗ ಬಾಕ್ಸಿಂಗ್ ಸರದಾರ ಜೋಶುವಾ ಗೆಲುವಿನ ಹಾದಿಗೆ ಮರಳಿದ್ದಾರೆ ಪ್ರಸ್ತುತ ಜರ್ಮೈನ್ ಫ್ರಾಂಕ್ಲಿನ್ ವಿರುದ್ಧ ಹೋರಾಟ ನಡೆಸಲಿದ್ದಾರೆ. ಪ್ರಸ್ತುತ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಟೈಸನ್ ಫ್ಯೂರಿ ವಿರುದ್ಧ ಮುಂದಿನ 2024 ರಲ್ಲಿ ಹೋರಾಡುವ ಯೋಜನೆಯನ್ನು ಆಂಥೋನಿ ಜೋಶುವಾ ಬಹಿರಂಗಪಡಿಸಿದ್ದಾರೆ.
