ಉದಯವಾಹಿನಿ ತಾಳಿಕೋಟಿ: ಪಟ್ಟಣಕ್ಕೆ ಮೊದಲ ಬಾರಿ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ವಿವಿಧ ಇಲಾಖೆಗಳ ಕಾರ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಶನಿವಾರ ಪಟ್ಟಣಕ್ಕೆ ಆಗಮಿಸಿದ ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ತಹಸಿಲ್ದಾರ್ ಕಚೇರಿ ಪುರಸಭೆ ಕಾರ್ಯಾಲಯ ಗ್ರಂಥಾಲಯ ತಾಳಿಕೋಟಿ ಹಡಗಿನಾಳ ಸೇತುವೆ ರಸ್ತೆ ಮುಖ್ಯವಾಗಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಅಗತ್ಯವಾದ ಜಾಗಗಳನ್ನು ವೀಕ್ಷಿಸಿ ದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಳಿಕೋಟಿ ನೂತನ ತಾಲೂಕ ಆಗಿರುವುದರಿಂದ ತಾಲೂಕಿಗೆ ಅಗತ್ಯವಾದ ಕಾರ್ಯಾಲಯ ಹಾಗೂ ಅವುಗಳಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳ ಕುರಿತು ಪರಿಶೀಲಿಸುವ ಉದ್ದೇಶದಿಂದ ನಾನು ಇಂದು ತಾಳಿಕೋಟಿಗೆ ಭೇಟಿ ನೀಡಿದ್ದೇನೆ ಈ ಭೇಟೆಯಲ್ಲಿ ಮುಖ್ಯವಾಗಿ ತಾಲೂಕ ಆಡಳಿತಕ್ಕೆ ಅಗತ್ಯವಾದ ಎಲ್ಲಾ ಕಾರ್ಯಾಲಯಗಳು ಒಂದು ಸೂರಿನಡೆ ಮಾಡಲು ಮಿನಿ ವಿಧಾನಸೌಧ ಕಟ್ಟಡ ಅದಕ್ಕೆ ಬೇಕಾದ ಅಗತ್ಯ ಎರಡು ಮೂರು ಸ್ಥಳಗಳ ವೀಕ್ಷಣೆಯನ್ನು ಮಾಡಿದ್ದೇನೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಸ್ಥಳದ ಆಯ್ಕೆಯನ್ನು ಮಾಡಲಾಗುವುದು ಇದರ ಜೊತೆಗೆ ಪುರಸಭೆ ಹಾಗೂ ತಹಶೀಲ್ದಾರ್ ಕಾರ್ಯಾಲಯದಲ್ಲಿಯ ವ್ಯವಸ್ಥೆ ಕುರಿತು ಕೆಲವು ವಿಷಯಗಳು ಮುಂದೆ ಬಂದಿವೆ. ಅವುಗಳನ್ನು ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದರು. ಈ ಸಮಯದಲ್ಲಿ ತಹಸಿಲ್ದಾರ್ ಕೀರ್ತಿ ಚಾಲಕ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ .ಆರ್. ಬಿರಾದಾರ. ಪುರಸಭೆ ಮುಖ್ಯ ಅಧಿಕಾರಿ ಉದಯಕುಮಾರ್ ಘಟ ಕಾಂಬಳೆ. ಪೊಲೀಸ್ ಇಲಾಖೆಯ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.
