ಉದಯವಾಹಿನಿ ಸಿಂಧನೂರು: ‌ ಕಾರಟಗಿ ನಗರದ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿದ್ಯಾಭಾರತಿ ಮಹಿಳಾ ಮಹಾವಿದ್ಯಾಲಯ ಹಾಗೂ ಶ್ರೀ ಸ್ಪೂರ್ತಿ ಪದವಿ ಪೂರ್ವ ಕಾಲೇಜ್,ನ ಸ್ನೇಹ ಸಮ್ಮಿಲನ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಗಳ ಬಿಳ್ಕೋಡುಗೆ ಸಮಾರಂಭವನ್ನು ಆಯೋಜಿಸಿದ್ದು ಶ್ರೀ ಡಾ.ಸದಾನಂದ ಶರಣರು ಶ್ರೀ ಸಿದ್ದಾಶ್ರಮ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

ಈ ಕಾರ್ಯಕ್ರಮ ಸಮಾರಂಭದ ಉದ್ಘಾಟಕರಾಗಿ ಸರ್ವಜನರ ಸೇವಕರಾದ ಕೆ ಕರಿಯಪ್ಪ ಭಾಗವಹಿಸಿ,ಸಮಾರಂಭವನ್ನು ಉದ್ಘಾಟಿಸಿ ನಂತರ ವಿದ್ಯಾರ್ಥಿನಿಯರ ಕುರಿತು ಮಾತಾನಾಡಿದರು ಅವರು ತೊಟ್ಟಿಲು ತೂಗುವ ಕೈ ಇಡೀ ದೇಶವನ್ನೇ ಆಳುತ್ತೆ, ಹೆಣ್ಣು ಮಕ್ಕಳು ಇನ್ನೂ ಈ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರೆಯಬೇಕು ನಿಮ್ಮ ತಂದೆ-ತಾಯಿ ಹಾಗೂ ಕಾಲೇಜ್ ಗೆ ಉತ್ತಮ ಹೆಸರು ತರಬೇಕೆಂದು ತಿಳಿಸಿದರು.

ಎಮ್ ನರಸಿಂಹರಾವ್ ಅಧ್ಯಕ್ಷರು ವಿ.ಬಿ ಕಾಲೇಜ ಕಾರಟಗಿ, ಶ್ರೀಮತಿ ಆಶಾಕುಮಾರಿ ಪ್ರಾಶುಂಪಾಲರು ವಿ ಬಿ ಕಾಲೇಜ ಕಾರಟಗಿ, ಎಸ್ ವೀರೇಶ ಹಾಲಸಮುದ್ರ ಆಡಳಿತಾಧಿಕಾರಿಗಳು ವಿ ಬಿ ಕಾಲೇಜ್, ಚನ್ನಬಸವ ಸುಂಕದ ವಾಣಿಜ್ಯೋದ್ಯಮಿಗಳು ಕಾರಟಗಿ, ಬಸವರಾಜ ಕೊಪ್ಪದ ಪುರಸಭೆ ಸದಸ್ಯರು ಕಾರಟಗಿ, ಶಂಭಣ್ಣ ಅರಳಿ, ವಾಣಿಜ್ಯೋದ್ಯಮಿಗಳು ಕಾರಟಗಿ, ನಾಗರಾಜ ವಕೀಲರು, ನಾಗರಾಜ ಅರಳಿ ಮಾಜಿ ನಿರ್ದೇಶಕರು ವಿ,ಕೃ,ಮಾರುಕಟ್ಟೆ ಕಾರಟಗಿ, ವಿದ್ಯಾಭಾರತಿ, ಹಾಗೂ ಸ್ಪೂರ್ತಿ ಕಾಲೇಜ್ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!