ಉದಯವಾಹಿನಿ, ನವದೆಹಲಿ, : ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಿದ್ದು, 39 ಮಂದಿಗೆ ಅವಕಾಶ ಕಲ್ಪಿಸಿದ್ದಾರೆ, 18 ಮಂದಿ ಖಾಯಂ ಆಹ್ವಾನಿತರು, 5 ಉಸ್ತುವಾರಿ ಕಾರ್ಯದರ್ಶಿಗಳು, 9 ಪ್ರಧಾನ ಕಾರ್ಯದರ್ಶಿಗಳು, 9 ವಿಶೇಷ ಆಹ್ವಾನಿತರು, ನಾಲ್ವರು ಕಚೇರಿಯೇತರ ಸದಸ್ಯರನ್ನು ನೇಮಿಸಲಾಗಿದೆ.
39 ಮಂದಿಯ ಪ್ರಮುಖ ಸಮಿತಿಯಲ್ಲಿ ಕರ್ನಾಟಕದ ರಾಜ್ಯಸಭಾ ಸದಸ್ಯ ಸಯ್ಯದ್ ನಾಜಿರ್ ಹುಸೇನ್ ಅವಕಾಶ ಪಡೆದಿದ್ದಾರೆ. ಉಳಿದಂತೆ ಕರ್ನಾಟಕದವರಾದರೂ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಮುಂಚೂಣಿಯಲ್ಲಿರುವ ಜಯರಾಂ ರಮೇಶ್ ಸದಸ್ಯರಾಗಿದ್ದಾರೆ.
ಖಾಯಂ ಆಹ್ವಾನಿತರಲ್ಲಿ ಕರ್ನಾಟಕದ ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್ ಅವರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಹರಿಪ್ರಸಾದ್‍ರನ್ನು ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.
ಇದೇ ಮೊದಲ ಬಾರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾಗೆ ಅವಕಾಶ ಕಲ್ಪಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ಮನಮೋಹನ್ ಸಿಂಗ್, ಅೀಧಿರ್ ರಂಜನ್ ಚೌದ್ರಿ, ಎ.ಕೆ.ಆಂಟೋನಿ, ಅಂಬಿಕಾ ಸೋನಿ, ಮೀರಾಕುಮಾರ್, ದಿಗ್ವಿಜಯ್ ಸಿಂಗ್, ಪಿ.ಚಿದಂಬರಂ, ತಾರಿಕ್ ಅನ್ವರ್, ಲಾಲ್‍ತಾನ್‍ಅಹ್ವಾಲ, ಮುಕುಲ್ ವಾಸ್ಮಿಕ್, ಆನಂದ್ ಶರ್ಮಾ, ಅಶೋಕ್ ರಾವ್ ಚೌವ್ಹಾಣ್,
ಅಜಯ್ ಮಖೇನ್, ಚರಣ್‍ಜಿತ್ ಚನ್ನಿ, ಕುಮಾರಿ ಸೆಲ್ಜಾ, ಘಾಯ್‍ಕಾಂಗಮ್, ಎನ್.ರಘುವೀರ ರೆಡ್ಡಿ, ಶಶಿ ತರೂರ್, ತಾಮರ ಧ್ವಜಸಾಹೂ, ಅಭಿಷೇಕ್ ಮನುಸಿಂಗ್ವಿ, ಸಲ್ಮಾನ್ ತುರ್ಷಿದ್, ಜಿತೇಂದ್ರ ಸಿಂಗ್, ರಣದೀಪ್ ಸಿಂಗ್ ಸುರ್ಜೆವಾಲ, ಸಚಿನ್ ಪೈಲೆಟ್, ದೀಪಕ್ ಬಾಬರಿಯಾ, ಜಗದೀಶ್ ಠಾಕೂರ್, ಜಿ.ಎ.ಮೀರ್, ಅವಿನಾಶ್ ಪಾಂಡೆ, ದೀಪಾದಾಸ್ ಮುನ್ಶಿ, ಮಹೇಂದ್ರ ಜಿತ್ ಸಿಂಗ್ ಮಾಳ್ವಿಯ, ಘೋರವ್ ಗೋಗೈ, ಕಮಲೇಶ್ವರ್ ಪಟೇಲ್, ಕೆ.ಸಿ.ವೇಣುಗೋಪಾಲ್ ಸದಸ್ಯರಾಗಿದ್ದಾರೆ.
