
ಉದಯವಾಹಿನಿ,ಚಿಂಚೋಳಿ: ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಇಂದಿರಾ ಕ್ಯಾಂಟೀನ್ ಗೆ ಜಿಲ್ಲಾಧಿಕಾರಿ ಬಿ.ಫೌಜೀಯಾ ತರನ್ನುಮ್ ಧೀಡರನೆ ಭೇಟಿಯಾಗಿ ಊಟದ ಗುಣಮಟ್ಟವನ್ನು ಹಾಗೂ ಕ್ಯಾಂಟೀನ್ ಸ್ವಚ್ಚತೆಯನ್ನು ಹಾಗೂ ಊಟ ತಿಂಡಿಯನ್ನು ದಿನಕ್ಕೆ ಎಷ್ಟು ಜನ ಊಟ ಮಾಡುತ್ತಾರೆ ಎಂದು ಮಾಹಿತಿ ಪಡೆದು ಇನ್ನು ಗುಣಮಟ್ಟದ ಚನ್ನಾಗಿ ಊಟ ನೀಡಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಮಾಹಿತಿ ನೀಡಿದ ಅವರು ಬೆಳಿಗ್ಗೆ 300ಜನ,ಮಧ್ಯಾಹ್ನ 200 ಜನ,ಸಾಯಂಕಾಲ 180ಜನ ಟೋಕನ್ ತೆಗೆದುಕೊಂಡು ಊಟ ಮಾಡುತ್ತಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಹಾಶಪ್ಪ ಪೂಜಾರಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2ತಹಸೀಲ್ದಾರ್ ವೆಂಕಟೇಶ ದುಗ್ಗನ್,ಪ್ರಭುಲಿಂಗ ಬುಳ್ಳಾ,ಸಂಗಮೇಶ,ರವಿಕುಮಾರ ಚಿಟ್ಟಾ,ಕೇಶವ ಕುಲಕರ್ಣಿ,ಅನೇಕರಿದ್ದರು.
