ಉದಯವಾಹಿನಿ ದೇವದುರ್ಗ : ತಾಲೂಕ ತಹಸೀಲ್ ಕಾರ್ಯಾಲಯದಲ್ಲಿ ರವಿವಾರ ತಾಲೂಕ ಆಡಳಿತ ದೇವದುರ್ಗ, ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ದಿ.ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನಾಯಕ ಡಿ.ದೇವರಾಜ ಅರಸು ರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ಕರ್ನಾಟಕ ರಾಜ್ಯದ ಜನಪ್ರೀಯ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಶ್ರೀ ಚನ್ನಮಲ್ಲಪ್ಪ ಘಂಟಿ ಅವರು ಮಾರ್ಲಾಪಣೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು. ಬಳಿಕ ಜಯಂತಿ ಉದ್ದೇಶಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಾತನಾಡಿ, ಮೇಧಾವಿ ರಾಜಕಾರಣಿ, ಹಿಂದುಳಿದ ವರ್ಗಗಳ ಜನಪರ ನಾಯಕ, ಡಿ.ದೇವರಾಜ ಅರಸು ಅವರು ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಋಣಮುಕ್ತ ಕಾಯ್ದೆ, ದೀನ ದಲಿತ, ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕ ಜನರಲ್ಲಿ ಮನೆಮಾತಾಗಿದ್ದಾರೆ ಎಂದು ಹೇಳಿದರು.ದೇವದುರ್ಗ ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ಡಿ.ದೇವರಾಜ ಅರಸು ರಾಜ್ಯದ ಬಡ ಜನರಿಗೆ ಉಳುವವನಿಗೆ ಭೂಮಿ, ಹಾವನೂರು ಆಯೋಗ ರಚನೆ, ಗೇಣಿ ಹೋರಾಟದ ಅನುಷ್ಠಾನ, ರಾಜಕೀಯ ಜೀವನ ಸೇರಿದಂತೆ ಇಂದಿಗೂ ಅವರ ಪ್ರಮುಖ ನಿರ್ಧಾರಗಳ ಪ್ರತಿಫಲ, ಇಂದಿನ ಪೀಳಿಗೆಗೆ ಹಾಗೂ ಹಿಂದುಳಿದ ವರ್ಗಗಳ ಜನಾಂಗಕ್ಕೆ ನ್ಯಾಯ ಸಿಗುತ್ತಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾನಪ್ಪ ಬಡಿಗೇರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಪ್ಪ, ಎಂ.ಆರ್.ಹೆಚ್.ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪೂರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್. ಶಿವರಾಜ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಗೂಳಪ್ಪ ಹೇಮನೂರು, ವಿಶ್ವಕರ್ಮ ಸಮಾಜದ ಅಧ್ಯಕ್ಷ ರಮೇಶ ಪತ್ತಾರ್, ಈಡಿಗ ಸಮಾಜದ ಅಧ್ಯಕ್ಷ ರಂಗನಾಥ ಅಬಕಾರಿ, ಕಾರ್ಯಾಧ್ಯಕ್ಷ ಬಲಭೀಮ ಹೂಗಾರ, ಜಿಲ್ಲಾ ಸಮಿತಿ ಸದಸ್ಯ ಚಿತ್ರಶೇಖರ್ ಮಲದಕಲ್, ಹಿಂದುಳಿದ ಒಕ್ಕೂಟದ ಮುಖಂಡರಾದ ಶ್ರೀ ರಾಮನಂದ ಪಾಟೀಲ್, ರಾಘವೇಂದ್ರ ಹೇಮನೂರು, ನರಸಣ್ಣ ನಿಲವಂಜಿ,  ನರಸಪ್ಪ ದೇವದುರ್ಗ, ಅಮರೇಶ ಇಟಗಿ, ಮಹಾದೇವಪ್ಪ ನಾಗೋಲಿ, ಭೀಮಣ್ಣ, ಅಯ್ಯಣ್ಣ, ಮರೆಯಪ್ಪ ಹೇಮನೂರು, ಮಲ್ಲಪ್ಪ ವಿಶ್ವಕರ್ಮ, ಪ್ರಭಾಕರ್ ದೇವದುರ್ಗ, ರಮೇಶ, ಜಯರಾಜ್,  ಮಹಿಳಾ ಘಟಕ ತಾಲೂಕ ಅಧ್ಯಕ್ಷೆ ವಿಜಯಲಕ್ಷ್ಮೀ ಮಡಿವಾಳ, ರೇಣುಕಾ, ಭೀಮಶಂಕರ, ಅಯ್ಯಪ್ಪ ಹೇಮನೂರು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ತಹಸೀಲ ಕಾರ್ಯಾಲಯ ಸಿಬ್ಬಂದಿ ವರ್ಗದವರು, ವಿವಿಧ ಸಂಘಟನೆಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!