ಉದಯವಾಹಿನಿ, ರೋಹಿತ್ ಶರ್ಮಾ, ನಾಯಕ, ಹಾರ್ದಿಕ್ ಪಾಂಡ್ಯ, ಉಪನಾಯಕ, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಶಾರ್ದೂಲ್ ಠಾಕೂರ್, ಕೆ.ಎಲ್.ರಾಹುಲ್, ಪ್ರಸಿದ್ದ್ ಕೃಷ್ಣ, ಶುಭಮನ್ ಗಿಲ್, ವಿರಾಟ್ ಕೊಹಿ, ಅಕ್ಷರ್ ಪಟೇಲ್, ಜಸ್ಬಿತ್ ಬೂಮ್ರಾ, ಮಹಮದ್ ಷಮಿ, ಮಹಮದ್ ಸಿರಾಜ್, ರವೀಂದ್ರ ಜಡೇಜಾ, ಇಶಾನ್ ಕಿಶನ್, ಕುಲದೀಪ್ ಯಾದವ್

ಮುಂಬೈ,ಆ.೨೧-ಮುಂಬರುವ ಏಷ್ಯಾ ಕಪ್ ಟೂರ್ನಿಗೆ ೧೭ ಮಂದಿ ಭಾರತೀಯ ಆಟಗಾರರನ್ನು ರಾಷ್ಟ್ರೀಯ ಆಯ್ಕೆ iಂಡಳಿ ಇಂದು ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮಾ ತಂಡದಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ಗಾಯಾಳುವಾಗಿ ಹಲವು ತಿಂಗಳುಗಳಿಂದ ಕ್ರಿಕೆಟ್ ಆಂಗಳದಿಂದ ದೂರ ಉಳಿದಿದ್ದರು. ಇದೀಗ ರಾಹುಲ್ ಮತ್ತು ಅಯ್ಯರ್ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಇಬ್ಬರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್‌ಕರ್ ತಿಳಿಸಿದ್ದಾರೆ. ತಂಡದಲ್ಲಿ ಪ್ರಸಿದ್ಧ ಕೃಷ್ಣ, ಸೂರ್ಯ ಕುಮಾರ್ ಯಾದವ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ ೩೦ ರಿಂದ ಸೆಪ್ಟೆಂಬರ್ ೩೦ರವರೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಸೆಪ್ಟೆಂಬರ್ ೨ ರಂದು ಸಾಂಪ್ರಾದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿ ಸ್ವದೇಶದಲ್ಲೇ ಪ್ರತಿಷ್ಠಿತ ವಿಶ್ವ ಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಏಷ್ಯಾ ಕಪ್ ಟೂರ್ನಿ ಅತ್ಯಂತ ಮಹತ್ವದ್ದಾಗಿದ್ದು, ಈ ಟೂರ್ನಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!