ಉದಯವಾಹಿನಿ, ನವದೆಹಲಿ :ದಕ್ಷಿಣ ಆಫ್ರಿಕಾದಲ್ಲಿ ಈ ವಾರ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಸಂಭವನೀಯ ಚರ್ಚೆಗೆ ಮುಂಚಿತವಾಗಿ ಗಡಿಯಲ್ಲಿನ ಸಮಸ್ಯೆ ನಿವಾರಣೆಗೆ ಉಭಯ ದೇಶಗಳ ಸೇನಾ ಮೇಜರ್‌ಗಳ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
ಪೂರ್ವ ಲಡಾಖ್‌ನ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾದ ಸೇನಾ ಪಡೆಯ ಹಿರಿಯ ಅಧಿಕಾರಿಗಳು ಮೇಜರ್ ಜನರಲ್ ಮಟ್ಟದ ಮಿಲಿಟರಿ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ.
ಭಾರತೀಯ ಕಡೆಯಿಂದ ಮೇಜರ್ ಜನರಲ್‌ಗಳಾದ ೩ ಪದಾತಿ ದಳದ ಕಮಾಂಡರ್ ಪಿ ಕೆ ಮಿಶ್ರಾ ಮತ್ತು ಸಮವಸ್ತ್ರ ಪಡೆ ಕಮಾಂಡರ್ ಹರಿಹರನ್ ನೇತೃತ್ವದಲ್ಲಿ ದೌಲತ್ ಬೇಗ್ ಓಲ್ಡಿ ಮತ್ತು ಚುಶುಲ್‌ನಲ್ಲಿ ವಿಶ್ವಾಸ ವರ್ಧನೆಯ ಕ್ರಮ ಬಲಪಡಿಸುವ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಲಾಗಿದೆ,
ಡೆಪ್ಸಾಂಗ್‌ನಲ್ಲಿನ ಪ್ರಮುಖ ಸಮಸ್ಯೆಗಗಳು ಡೆಮ್‌ಚೋಕ್‌ನಲ್ಲಿರುವ ಚಾರ್ಡಿಂಗ್ ನಿಂಗ್‌ಲಂಗ್ ನಲ್ಲಿ ಟ್ರ್ಯಾಕ್ ಜಂಕ್ಷನ್, ಸೈನ್ಯದ ವಿಘಟನೆಯ ನಂತರ ಮೊದಲು ಸ್ಥಾಪಿಸಲಾದ ಬಫರ್ ವಲಯಗಳು ಮತ್ತು ಪ್ರದೇಶದ ಒಟ್ಟಾರೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಸಮಸ್ಯೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ
ಡ್ರೋನ್‌ಗಳ ಮೂಲಕ ಯಾವುದೇ ವಾಯುಪ್ರದೇಶದ ಉಲ್ಲಂಘನೆ ತಪ್ಪಿಸುವುದು ಮತ್ತು ಗಸ್ತು ತಿರುಗುವಿಕೆಯ ‘ಮಿತಿ’ಗಳನ್ನು ವ್ಯಾಖ್ಯಾನಿಸುವುದು ಮತ್ತು ಪರಸ್ಪರರ ಗಸ್ತುಗಳ ಬಗ್ಗೆ ಪೂರ್ವ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
