ಉದಯವಾಹಿನಿ,ಸಿಯೋಲ್ : ದಕ್ಷಿಣ ಕೊರಿಯಾ ಮತ್ತು ಅಮೆರಿಕ ತಮ್ಮ ವಾರ್ಷಿಕ ಜಂಟಿ ಸೇನಾ ಅಭ್ಯಾಸವನ್ನು ಆರಂಭಿಸುತ್ತಿದ್ದಂತೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರು ನೌಕಾಪಡೆಯ ಘಟಕಕ್ಕೆ ಭೇಟಿ ನೀಡಿ ಯುದ್ಧನೌಕೆಯಲ್ಲಿ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು ಪರಿಶೀಲಿಸಿದ್ದಾರೆ.
ಕಿಮ್ ಅವರು ಪೂರ್ವ ಕರಾವಳಿಯನ್ನು ರಕ್ಷಿಸುವ ನೌಕಾಪಡೆಯ ಫ್ಲೋಟಿಲ್ಲಾಗೆ ಭೇಟಿ ನೀಡಿ ಗಸ್ತು ಹಡಗಿನ ನಾವಿಕರು ಕಾರ್ಯತಂತ್ರ ಕ್ರೂಸ್ ಕ್ಷಿಪಣಿಗಳ ಉಡಾವಣಾ ಅಭ್ಯಾಸ ವೀಕ್ಷಿಸಿದರು ಎನ್ನಲಾಗಿದೆ ಆದರೆ ಭೇಟಿಯ ದಿನಾಂಕ ಬಹಿರಂಗವಾಗಿಲ್ಲ.
ಹಡಗಿನ ಯುದ್ಧ ಕಾರ್ಯವನ್ನು ಮತ್ತು ಅದರ ಕ್ಷಿಪಣಿ ವ್ಯವಸ್ಥೆಯ ವೈಶಿಷ್ಟ್ಯವನ್ನು ಮರುದೃಢೀಕರಿಸಲು ಮತ್ತು ನಿಜವಾದ ಯುದ್ಧದಲ್ಲಿ ದಾಳಿ ಕಾರ್ಯಾಚರಣೆಯನ್ನು ನಡೆಸುವಲ್ಲಿ ನಾವಿಕರು ನುರಿತರಾಗಲು ಈ ಜಂಟಿ ಸಮರಾಭ್ಯಾಸ ಕೈಗೊಳ್ಳಲಾಗಿದೆ. ಪೆಟ್ರೋಲ್ ಶಿಪ್ ನಂ. ೬೬೧ ರಿಂದ ಕ್ಷಿಪಣಿ ಗುಂಡು ಹಾರಿಸುವುದನ್ನು ಕಿಮ್ ಪ್ರತ್ಯೇಕ ಹಡಗಿನಲ್ಲಿ ಕುಳಿತು ದೃಶ್ಯವನ್ನು ವೀಕ್ಷಿಸಿದರು. ಉತ್ತರದ ನೌಕಾಪಡೆಯನ್ನು ಸುಧಾರಿತ ಯುದ್ಧ ದಕ್ಷತೆ ಮತ್ತು ಮೇಲ್ಮೈ ಮತ್ತು ನೀರೊಳಗಿನ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸಾಮರ್ಥ್ಯಗಳ ಆಧುನಿಕ ವಿಧಾನಗಳೊಂದಿಗೆ ಸರ್ವಮಟ್ಟದ ಮತ್ತು ಶಕ್ತಿಯುತ ಸೇವಾ ಗುಂಪನ್ನಾಗಿ ಮಾಡಲು ಕಿಮ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ದಕ್ಷಿಣ ಕೊರಿಯಾ ಮತ್ತು ಯುಎಸ್ ಸೋಮವಾರ ವಾರ್ಷಿಕ ಉಲ್ಚಿ ಫ್ರೀಡಂ ಶೀಲ್ಡ್ (ಯುಎಫ್‌ಎಸ್) ಅಭ್ಯಾಸ ಪ್ರಾರಂಭಿಸಿದವು. ಈ ತರಬೇತಿ ಆಗಸ್ಟ್ ೩೧ ರವರೆಗೆ ನಡೆಯಲಿದೆ. ಜಂಟಿ ಸೇನಾ ಕವಾಯತುಗಳನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಗಳ ಉಡಾವಣೆಯಂತಹ ಪ್ರಮುಖ ಪ್ರಚೋದನೆಗಳನ್ನು ನಡೆಸಬಹುದೆಂಬ ನಿರೀಕ್ಷೆಯ ನಡುವೆಯೇ ಕಿಮ್ ಅವರ ತಪಾಸಣೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!