
ಉದಯವಾಹಿನಿ ಇಂಡಿ : ಭೂ ಸುಧಾರಣೆಯ ಕಾಯಿದೆ ತರುವ ಮೂಲಕ ಬಡವರಿಗೆ ಭೂಮಿ ನೀಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ದುರ್ಬಲರಿಗೆ ಬದುಕಿನುದ್ದಕ್ಕೂ ಫಲ ನೀಡಿ ಬಡವರ ಒಡಲು ತುಂಬಿದ ದೇವರಾಜ ಅರಸರವರು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ದೇವರಾಜ ಅರಸುವರವ 108 ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿ ನಾದ ಕೆಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಿ.ಎಂ.ಬAಡಗರ ಮಾತನಾಡಿ ದುರ್ಬಲರನ್ನು ಕಡೆಗಣ ಸಿದಾಗ ಇಂಗ್ಲoಡ್, ಪ್ರಾನ್ಸ,ಚೀನಾ ದೇಶಗಳಲ್ಲಿ ನಡೆದ ಕ್ರಾಂತಿಯ ರೂಪದಲ್ಲಿ ಡಿ. ದೇವರಾಜ ಅರಸರವರು ಕರ್ನಾಟಕದಲ್ಲಿ ಮೌನ ಕ್ರಾಂತಿ ರೂಪದಲ್ಲಿ ಅರಸರವರು ಕ್ರಾಂತಿ ಮಾಡಿ ಬಡವರ ಅಭಿವೃದ್ಧಿ ಮಾಡಿದ ಅಭಿವೃದ್ದಿಯ ಹರಿಕಾರರು ಎಂದರು. ದುರ್ಬಲರನ್ನು ಮೇಲೇತ್ತಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ತಹಸೀಲ್ದಾರ ಬಿ.ಎಸ್.ಕೊಡಬಾಗಿ, ಬಸವರಾಜ ಗೊರನಾಳ ಮಾತನಾಡಿದರು. ವೇದಿಕೆಯ ಮೇಲೆ ತಾ.ಪಂ ಇಒ ಸುನೀಲ ಮದ್ದೀನ, ಬಿಸಿಎಂ ಅಧಿಕಾರಿ ಎನ್.ಎಸ್.ದುದ್ದಗಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ, ಕವಲಗಿ ಮತ್ತಿತರಿದ್ದರು. ತಾಲೂಕಿನ ವಿವಿಧ ವಸತಿ ನಿಲಯದ ಮಕ್ಕಳಿಂದÀ ಪರೀಕ್ಷೆ , ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೇಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
