
ಉದಯವಾಹಿನಿ, ಔರಾದ್ :ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದಾಗಿ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ ಎಂದು ಮುಖಂಡ ಬಂಡೆಪ್ಪಾ ಕಂಟೆ ಹೇಳಿದರು. ಪಟ್ಟಣದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಬೀದರ್, ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಔರಾದ ವತಿಯಿಂದ ಗುಡಿಸಲು ವಾಸಿಗಳಿಗೆ ಪಂಚಮಿ ಅಂಗವಾಗಿ ಹಾಲು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವ ಮೂಲಕ ರತ್ನದೀಪ್ ಕಸ್ತೂರೆ ಮತ್ತು ತಂಡದವರು ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೋರ ಬರಬೇಕು ಎಂದು ಹೇಳಿದರು.ಪಟ್ಟಣ ಪಂಚಾಯತ್ ಸದ್ಯಸರಾದ ಬಂಟಿ ದರ್ಬಾರೆ ಮಾತನಾಡಿ, ನಿರ್ಗತಿಕರು ಬಡವರಿಗೆ ಮಾಡಿದ ಸೇವೆ ದೇವರಿಗೆ ಸೇವೆ ಮಾಡಿದಹಾಗೆ ಆದ್ದರಿಂದ ಸಮಾಜದ ಪ್ರತಿಯೊಬ್ಬರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸುನಿಲ್ ಜೀರೋಬೆ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ರತ್ನದೀಪ ಕಸ್ತೂರೆ, ಸುನಿಲ್ ಮಿತ್ರಾ, ಭೀಮರಾವ್, ವಿವೇಕ ನಿರ್ಮಳೆ, ಬಾಲಾಜಿ ದಾಮಾ, ಬಾಲಾಜಿ ಮಿತಬಾ, ಶಾದುಲ್ ಬಾಗವಾನ, ಅಜಯ ವರ್ಮಾ, ಗೌತಮ್, ಮಸಣಜಿ ಇದ್ದರು.
