
ಉದಯವಾಹಿನಿ ಅಫಜಲಪುರ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ಪಟ್ಟಣದಲ್ಲಿ ಬಹುತೇಕರು ಮನೆಯಲ್ಲಿಯೇ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಹುತ್ತ, ನಾಗರ ಮೂರ್ತಿಗೆ ಹಾಲೆರೆದರು.ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು.ಹನುಮಾನ ದೇವಸ್ಥಾನದಲ್ಲಿ ಅಶ್ವತ್ಥ ಮರದ ಕೆಳಗಿರುವ ನಾಗರ ಮೂರ್ತಿಗೆ ಮಹಿಳೆಯರು ಹಾಲೆರೆದರು.ಮಣ್ಣೂರ ಗ್ರಾಮದ ಈಶ್ವರ.(ಕಲ್ಲಲಿಂಗೇಶ್ವರ) ದೇವಸ್ಥಾನದಲ್ಲಿರುವ ಚನ್ನಕೇಶವ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೆ ಮಹಿಳೆಯರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಹಾಲು ಎರೆದರು.ಪಟ್ಟಣದ ಪವನ ಆಲಬಾಳ ಅವರ ಮನೆಯಲ್ಲಿ ನಾಗರ ಮೂರ್ತಿಗೆ ವಿಶೇಷ ಪೂಜೆ ಷಲ್ಲಿಸಿ ಹಾಲು ಎರೆದರು ಈ ಸಂದರ್ಭದಲ್ಲಿ ಜಾಹ್ನವಿ ಜ್ಯೋಶಿ ಅಂಜನಾ ಹುಲ್ಲೂರ ಮಾಧುರಿ ಬಿಲ್ವಾಡ ಲತಾ ಕುಲಕರ್ಣಿ ಸುಜಾತಾ ಬಿಲ್ವಾಡ ಸುನಿತಾ ಆಲಬಾಳ ಅಶ್ವಿನಿ ಖಟಾವೆ ಪೂರ್ಣಿಮಾ ಬಿಲ್ವಾಡ ವೈಷ್ಣವಿ ಜ್ಯೋಶಿ ಇತರರಿದ್ದರು
