ಉದಯವಾಹಿನಿ ಕುಶಾಲನಗರ ;- ಎ.ಎಂ.ಸಿ.ಎ.ಡಿ. ಸೆಂಟರ್ ಅಫ್ ಎಕ್ಸ್ ಲೆನ್ಸ್ ನ ಅಂತರರಾಷ್ಟೀಯ ಪ್ರಮಾಣಿಕೃತ “ಲೈಪ್ ಸ್ಕೀಲ್ ಟ್ರೆöÊನರ್” ಕಾರ್ಯಕ್ರಮವನ್ನು ಯಶಶ್ವಿಯಾಗಿ ಪೂರೈಸಿದ್ದಕ್ಕಾಗಿ ಸುಂಟಿಕೊಪ್ಪದ ಸಮಾಜ ಸೇವಕ ಸ್ವಸ್ಥ ಸಂಸ್ಥೆಯ ಸಿ.ಬಿ.ಅರ್. ಸಂಯೋಜಕ ಮುರುಗೇಶ “ಲೈಪ್ ಸ್ಕೀಲ್ ಟ್ರೆನರ್” ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮೈಸೂರಿನ ಎ.ಎಂ.ಸಿ.ಎ.ಡಿ. ಸಂಸ್ಥೆಯಲ್ಲಿ ನಡೆದ ಪದವಿ ಪ್ರಮಾಣದ ಘುಟೀಕೊತ್ಸವದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯತೆ ಸಂಖ್ಯೆ ಜಿ.ಎನ್.ಎ.೦೯೮ಎನ್ ಎ.ಎ.ಟಿ.೦೧೧೧ ಯಡಿಯಲ್ಲಿ ಉತ್ತಮ ಜೀವನ ತರಬೇತಿ ಕೌಶಲ್ಯದ ತರಬೇತಿದಾರ ಎಂದು ಗೌರವಿಸಿ ಪದವಿಯನ್ನು ನೀಡಲಾಯಿತ್ತು.
ಈ ಸಂದರ್ಭ ಬೆಂಗಳುರಿನ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಸುರೇಶ್, ಜೆ.ಸಿ.ಐ. ನ ಅಂತರರಾಷ್ಟಿಯ ತರಬೇತುದಾರ ಟಿ.ವಿ.ಎನ್. ಮೂರ್ತಿ ಪರಿವರ್ತನ ಶಾಲೆಯ ಡೀನ್ ಜೆಸಿಐನ ಅಂತರರಾಷ್ಟೀಯ ತರಬೇತುದಾರ ರವಿ ಪುರಸ್ಕಾರ್ ಪ್ರಶಸ್ತಿ ಪುರಸ್ಕತರಾದ ಚೇತನ್ ರಾಮ್ ರವರು ಎ.ಎಂ.ಸಿ.ಎಡಿ.ಸAಸ್ಥೆಯ ಮುಖ್ಯಸ್ಥರಾದ ಶಾರದಾ ಟಿ.ವಿ. ಕಾರ್ಯಕ್ರಮದ ಹೆಸರಾಂತ ವಾಗ್ಮಿ ಗುಂಡೂರಾವರು. ನಿವೃತ್ತ ಲೆಪ್ಟಿನೆಂಟ್ ರಂಜನ್ ರಾಮ್ ಯೋಗಪಟು ಮತ್ತು ಅದ್ಯಾತ್ಮಕ ತರಬೇತುದಾದ ಸಂದೀಪ್ ರವ ರು ಶ್ರೀ ಹರಿರವರು. ಜೋತೆಗೆ ಕರ್ನಾಟಕದ ೩೪ ಜಿಲ್ಲೆಯ ನೂರಾರು ತರಬೇತುದಾರರು ಉಪಸ್ಥಿತರಿದ್ದರು. ಇವರೆಲ್ಲರ ಸಮ್ಮಖದಲ್ಲಿ ಮುರುಗೇಶ್ ರವರಿಗೆ ಪದವಿಯನ್ನು ನೀಡಲಾಯಿತ್ತು.
