
ಉದಯವಾಹಿನಿ , ನವದೆಹಲಿ: ಬಾಕುದಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್ ಶಿಪ್ ವೇಳೆ ಪ್ರಾಗ್ ತನ್ನ ೧೮ ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ಧಾರೆಭಾರತೀಯ ಚೆಸ್ ಲೋಕಕ್ಕೆ ಹೊಸತಾರೆಯಾಗಿ ಆರ್. ಪ್ರಗ್ನಾನಂದ ಉದಯಿಸಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಫೈನನ್ಸ್ ಪ್ರವೇಶಿಸಿದ್ದು ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಪ್ರಗ್ನಾನಂದ ಅವರನ್ನು ಇನ್ನು ಮುಂದೆ ಪ್ರಾಗ್ ಎಂದು ಕರೆಯಲು ನಿರ್ಧರಿಸಲಾಗಿದೆ. ಕಲ್ಪನೆ, ಬುದ್ಧಿವಂತಿಕೆ ಮತ್ತು ವಿಶ್ವಕಪ್‌ನಲ್ಲಿ ಲಕ್ಷಾಂತರ ಚೆಸ್ ಅನುಯಾಯಿಗಳಿಗೆ ಅದರಲ್ಲಿಯೂ ಬಹುಪಾಲು ಭಾರತೀಯರಿಗೆ ಸಂತೋಷ ಸಾಗರದಲ್ಲಿ ಮುಳುಗಿದ್ದಾರೆ.
೨೦೧೬ರಲ್ಲಿ ೧೦ ವರ್ಷ ೧೦ ತಿಂಗಳು ೧೯ ದಿನ ವಯಸ್ಸಿನ ಕೋಚ್ ಆರ್.ಬಿ. ರಮೇಶ್ ಅವರ ಸ್ಟೇಬಲ್‌ನಿಂದ ಚೆನ್ನೈನ ಯುವಕ, ಕಿರಿಯ ಇಂಟರ್‍ನ್ಯಾಶನಲ್ ಮಾಸ್ಟರ್ ಆಗಿ ಹೊರ ಹೊಮ್ಮಿದಾಗಲೇ ಭವಿಷ್ಯದ ಚೆಸ್ ಆಟಗಾರ ಎಂದು ಭರವಸೆ ಮೂಡಿಸಿದರು.
