ಉದಯವಾಹಿನಿ,ಹೊಸಕೋಟೆ : ಪ್ರಸ್ತುತ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಎನ್ನುವುದುಒಂದುರೀತಿಯಲ್ಲಿದುಬಾರಿಆಗುತ್ತಿದ್ದು, ಬಡ ಮಧ್ಯಮ ವರ್ಗದವರಕೈಗೆಟುಕದಂತಹ ಸನ್ನಿವೇಶಉಂಟಾಗಿದೆಎAದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಜೆಸಿ ವೃತ್ತದಲ್ಲಿಆಕ್ಯುರೇಟ್‌ಇಮೇಜಿಂಗ್‌ಅAಡ್ ಡಯಾಗ್ನಾಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಶಿಕ್ಷಣ ಎನ್ನುವುದು ಬಡವರ, ಮಧ್ಯಮ ವರ್ಗದವರನ್ನು ಕೈ ಹಿಡಿದು ಮೇಲೆತ್ತುವರೀತಿಇರಬೇಕು.ಆದರೆಇವೆರಡು ವ್ಯಾಪಾರೀಕರಣವಾಗಿದೆ.ಇದರ ಪರಿಣಾಮವಾಗಿ ಖಾಸಗಿ ಆಸ್ಪತ್ರೆ ಹಾಗೂ ಶಾಲೆಗಳತ್ತ ಸುಳಿಯಲು ಭಯಪಡುವಂತಹ ಸ್ಥಿತಿ ಉಂಟಾಗಿದೆ.
ಸರ್ಕಾರಿ ವಲಯದಲ್ಲಿ ಸಾಕಷ್ಟು ಆರೋಗ್ಯ ಸೇವೆ ಲಭ್ಯವಾಗುತ್ತಿದ್ದರೂ ಸಹ ಖಾಸಗಿ ವಲಯಗಳ ಮೇಲೂ ಜನ ಸಾಕಷ್ಟು ಅವಲಂಬಿತರಾಗಿದ್ಧಾರೆ.ಆದ್ದರಿAದಗುಣಮಟ್ಟದಜೊತೆಗೆಆರೋಗ್ಯ ಸೇವೆಯನ್ನುಉತ್ತಮತಪಾಸಣೆಜೊತೆಗೆಒದಗಿಸಬೇಕುಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ದೀಪಾಹಟ್ಟಿ, ಡಾ.ಸಂಗಮೇಶ್ ಬಿರಾದಾರ್, ಡಾ.ದಿಲೀಪ್, ಡಾ.ಸುಪರ್ಣ, ಮಾತಂಗ ಫೌಂಡೇಷನ್‌ಅಧ್ಯಕ್ಷಡಾ. ಹೆಚ್.ಎಂ. ಸುಬ್ಬರಾಜು, ನಗರಸಭೆ ಸದಸ್ಯಕೇಶವಮೂರ್ತಿ ಸೇರಿದಂತೆ ಹಲವಾರುಗಣ್ಯರು ಹಾಜರಿದ್ದರು.
