ಉದಯವಾಹಿನಿ, ಔರಾದ್ : ರಕ್ತದಾನ ಮಾಡುವುದರಿಂದ ಮಾನವನ ಜೀವನ ಉಳಿವಿಗೆ ಸಹಾಯಕವಾಗುವುದರಿಂದ ರಕ್ತದಾನ ಮಹಾದಾನವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಶಶಿಧರ ಕೋಸಂಬೆ ಹೇಳಿದರು. ತಾಲ್ಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ವತಿಯಿಂದ ಭಾಲ್ಕಿ ಹಿರೇಮಠದ ಪೂಜ್ಯಶ್ರೀಗಳಾದ ಡಾ. ಬಸವಲಿಂಗ ಪಟ್ಟದೇವರ 73ನೇ ಜನ್ಮದಿನ ಪ್ರಯುಕ್ತ ಬುಧವಾರ ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಾ. ಬಸವಲಿಂಗ ಪಟ್ಟದೇವರು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಸಮಾಜೋದ್ಧಾರ ಕಾರ್ಯ ಮಾಡುವುದರಿಂದ ಅವರ ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಮಾಡುವುದು ಪವಿತ್ರ ಕಾರ್ಯವಾಗಿದೆ ಎಂದರು.ತಾಲೂಕಾ ಜಾನಪದ ಸಾಹಿತ್ಯ ಪರಿಷತ್ತ ಅದ್ಯಕ್ಷ ಡಾ ಸಂಜುಕುಮಾರ ಜುಮ್ಮಾ ಮಾತನಾಡಿ, ಪೂಜ್ಯಶ್ರೀ ಡಾ ಬಸವಲಿಂಗ ಪಟ್ಟದೇವರು ಪೂಜ್ಯಶ್ರೀ ಡಾ. ಚನ್ನಬಸವ ಪಟ್ಟದೇವರ ಆಶೀರ್ವಾದ ಮಾರ್ಗದಲ್ಲಿ ಸಮಾಜ ಸುಧಾರಣೆ ಕಾರ್ಯ ಮಾಡುತ್ತಿರುವದರಿಂದ ಪೂಜ್ಯಶ್ರೀಗಳು ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿದರು. ಸಿಡಿಪಿಓ ಭೀಮಸೇನ ಚೌಹಾಣ್, ಪಿಎಸ್ಐ ಮೆಹಬೂಬ ಅಲಿ, ಪೊಲೀಸ್ ಸಿಬ್ಬಂದಿ ಸೂರ್ಯಕಾಂತ ದೇಶಮುಖ, ವೈದ್ಯಾಧಿಕಾರಿಗಳಾದ ಅಬ್ದುಲ್ ವಾಜಿದ್, ಡಾ. ಸಂಗಮೇಶ್ ಬಿರಾದರ್, ಬೀದರ್ ರಕ್ತಕೇಂದ್ರದ ವೈದ್ಯಾಧಿಕಾರಿ ಶ್ರುತಿ, ಸಂತಪುರ್ ಆಸ್ಪತ್ರೆಯ ಸಿಬ್ಬಂದಿಗಳಾದ ಕಿರಣಕುಮಾರ್ ಬಿರಾದರ್, ಗುರು ಅಂಕಲಗಿ, ಲ್ಯಾಬ್ ಅನಿಲಕುಮಾರ್, ಸುಭಾಷ ಲಾಧಾ,ತುಕಾರಾಂ ಹಸನ್ನುಮುಖಿ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸಿದ್ದಾರೂಢ ಪಾಂಚಾಳ, ಶಿವಪುತ್ರ ಧರಣೆ, ರಮೇಶ್, ಗುರುಪ್ರಸಾದ್, ಸಂತೋಷ್ ಮಡಿವಾಳ ಇದ್ದರು.
