
ಉದಯವಾಹಿನಿ, ನವದೆಹಲಿ: ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ನಿರ್ಮಾಣ ಮಾಡಿದೆ.
ಈ ಮೂಲಕ ಅಮೇರಿಕಾ, ಚೀನಾ, ಸೋವಿಯತ್ ಒಕ್ಕೂಟದ ನಂತರ ಚಂದ್ರಯಾನ-3 ಸಾಪ್ಟ್ ಲ್ಯಾಂಡಿಂಗ್ ಆಗುವ ಮೂಲಕ ಭಾರತ ನಾಲ್ಕನೇ ದೇಶವಾಗಿ ಎಲೈಟ್ ಗುಂಪಿಗೆ ಸೇರ್ಪಡೆಯಾಗಿದೆ. ಐತಿಹಾಸಿಕ ಚಂದ್ರನ ಸ್ಪರ್ಶಕ್ಕೆ ಮುನ್ನ ದೇಶಾದ್ಯಂತ ಚಂದ್ರಯಾನ- 3 ಯಶಸ್ವಿ ಲ್ಯಾಂಡಿಂಗ್ ಗಾಗಿ ಪ್ರಾರ್ಥನೆಗಳು ನಡೆಸಲಾಗಿತ್ತು. ಅದರ ಫಲ ಎನ್ನುವಂತೆ. ಚಂದ್ರಯಾನ-3 ಬಹಳ ಉತ್ಸಾಹದಿಂದ ನಡೆದವು. ಚಂದ್ರಯಾನ-3 ಯಶಸ್ವಿಯಾಗಿ ಸಾಪ್ಟ್ ಲಾಂಡಿಂಗ್ ಆಗುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಅವಿರತ ಶ್ರಮ ಫಲಿಸಿದೆ.
ಚಂದ್ರಯಾನ-3 ಮಿಷನ್ ಅನ್ನು ಜುಲೈ 14 ರಂದು ಶ್ರೀಹರಿಕೋಟಾದಿಂದ ಪ್ರಾರಂಭಿಸಲಾಯಿತು.ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯಲು ಪ್ರಾರಂಭಿಸಿತು
ಪ್ರತಿ ಸೆಕೆಂಡಿಗೆ 1.68 ಕಿ.ಮೀ. ಚಂದ್ರನ ಮೇಲ್ಮೈಗೆ ಚಾಲಿತ ಲಂಬ ಅವರೋಹಣವನ್ನು ಪ್ರಾರಂಭಿಸುವ ಮೊದಲು ಅದು ನಿಧಾನವಾಗಿ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.
