ಉದಯವಾಹಿನಿ, ಮಾಸ್ಕೊ,: ಜೂನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧವೇ ವಿಫಲ ಕ್ಷಿಪ್ರಕ್ರಾಂತಿ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಷ್ಯಾದ ಬಾಡಿಗೆ ಸೇನೆ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್ ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ರಷ್ಯಾದಲ್ಲಿ ನಡೆದ ವಿಮಾನ ಅಪಘಾತವೊಂದರಲ್ಲಿಇ ಮೃತಪಟ್ಟಿದ್ದಾರೆ. ಯೆವ್‌ಗಿನಿ ಪ್ರಯಾಣಿಸುತ್ತಿದ್ದ ಎಂಬ್ರೆಯರ್ ಎಕ್ಸಿಕ್ಯೂಟಿವ್ ಜೆಟ್ ಪತನಗೊಂಡಿದೆ ಎಂದು ಇಂಟರ್‌ನ್ಯಾಷನಲ್ ಏವಿಯೇಶನ್ ಎಚ್‌ಕ್ಯೂ ವೆಬ್‌ಸೈಟ್ ಹೇಳಿದೆ.
ಖಾಸಗಿ ವಿಮಾನವು ಕುಜೆಂಕಿನೋ ಗ್ರಾಮದ ಬಳಿ ಪತನಗೊಂಡ ನಂತರ ವಿಮಾನದಲ್ಲಿದ್ದ ಪ್ರಿಗೋಝಿನ್ ಸೇರಿದಂತೆ ಎಲ್ಲಾ ೧೦ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ವೈಫಲ್ಯದ ಹೊರತಾಗಿ ಸಿಬ್ಬಂದಿಯ ಪ್ರಮಾದದಿಂದ ಕಳೆದ ೨೦ ವರ್ಷಗಳ ಸೇವೆಯಲ್ಲಿ ಸಂಭವಿಸಿದ ಮೊದಲ ದುರಂತ ಇದಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡಿದ್ದ ವ್ಯಾಗ್ನರ್ ಗ್ರೂಪ್, ರಷ್ಯಾ ಸೇನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ದೂರಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೊಯಿಗು ಅವರ ಪದಚ್ಯುತಿಯನ್ನು ಗುರಿಯಾಗಿಟ್ಟುಕೊಂಡು ಕ್ಷಿಪ್ರಕ್ರಾಂತಿಗೆ ಮುಂದಾಗಿತ್ತು. ರಷ್ಯಾದ ದಕ್ಷಿಣ ಭಾಗದ ನಗರ ರೊಸ್ತೋವ್ ಆನ್ ಡಾನ್ ಎಂಬಲ್ಲಿರುವ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ ಬೆಲರೂಸ್ ಅಧ್ಯಕ್ಷ ಅಲೆಗ್ಸಾಂಡರ್ ಲಾಕಾಶೆಂಕೋ ಅವರ ಮಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ಕ್ಷಿಪ್ರಕ್ರಾಂತಿ ೨೪ ಗಂಟೆಗಳ ಒಳೆ ವಾಪಾಸ್ ಪಡೆಯಲಾಗಿತ್ತು. ಅಲ್ಲದೆ ಕ್ರಾಂತಿಯ ಹಿಂದೆ ಇರುವವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ್ದರು. ಇದು ವಿಶ್ವಾಸದ್ರೋಹ ಹಾಗೂ ವಿಶ್ವಾಸದ್ರೋಹ ಎಂದು ತಿಳಿಸಿದ್ದರು. ಇನ್ನು ಎರಡು ದಿನಗಳ ಹಿಂದೆಯಷ್ಟೇ ಪ್ರಿಗೋಝಿನ್ ಅವರು ದಂಗೆ ಯತ್ನದ ಬಳಿಕ ಮೊದಲ ಬಾರಿಗೆ ವಿಡಿಯೋ ಸಂದೇಶದಲ್ಲಿ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಆಫ್ರಿಕಾದಲ್ಲಿ ನೆಲೆಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಇದೀಗ ವಿಮಾನ ಅಪಘಾತದಲ್ಲಿ ಲುಕಾಶೆಂಕೋ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!