ಉದಯವಾಹಿನಿ ದೇವನಹಳ್ಳಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿದರೇ ಭವಿಷ್ಯದಲ್ಲಿ ಅವರು ಸಮಾಜದ ಗಣ್ಯರ ಸ್ಥಾನದಲ್ಲಿ ಗುರುತಿಸಿಕೊಂಡು, ಸೇವಾ ಮನೋಭಾವ ಬೆಳೆಸಿಕೊಳ್ಳುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರೇಮ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯಲಿಯೂರು ಗ್ರಾಮ ಪರಿಶಿಷ್ಟ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಿಕಾ ಪರಿಕರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಸಶಕ್ತರಾಗಿರುವ ಗಣ್ಯ ವ್ಯಕ್ತಿಗಳು ಸಮಾಜಕ್ಕೆ ಏನಾದರೂ ವಾಪಸ್ ನೀಡಬೇಕೆಂದು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯ ಕೆಲಸವಾಗಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹಾಸ್ಟಲ್ ಗೆ ಸೇರಿಸಲು ಗ್ರಾಪಂ ಸದಸ್ಯರು ಪ್ರೋತ್ಸಾಹಿಸಬೇಕು ಪ್ರತಿಯೊಂದು ವಸತಿ ಶಾಲೆಯಲ್ಲಿಯೂ ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ಆಹಾರದ ಮೆನು ಬದಲಾವಣೆ ಮಾಡಲಾಗಿದೆ. ಸಂಜೆ ವೇಳೆಯಲ್ಲಿ ವಿಶೇಷ ತರಗತಿ ಆರಂಭಿಸಿದ್ದು, ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಯೋಜನೆ ಸಿದ್ಧ ವಿದೆ
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸಾಕಷ್ಟು ಬೆಂಬಲ ನೀಡುತ್ತಿದ್ದು, ಕೆಡಿಪಿ ಸದಸ್ಯರಾದ ಮುನಿಕೃಷ್ಣಪ್ಪ (ತಮ್ಮಯ್ಯ) ಮಾತನಾಡಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಇಂದಿಗೂ ಶೈಕ್ಷಣಿಕವಾಗಿ ಹಿಂದಿಳಿದಿದ್ದು, ಪ್ರತಿಯೊಬ್ಬ ಮಗುವನ್ನು ಸರ್ಕಾರಿ ಸೌಲಭ್ಯದ ಅಡಿಯಲ್ಲಿ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲು ಪೋಷಕರು ಮುಂದಾಗಬೇಕು, ಗುಣಮಟ್ಟದ ಶಿಕ್ಷಣದಿಂದ ಭವಿಷ್ಯದ ಯುವಕರನ್ನು ಪ್ರಬುದ್ಧರನ್ನಾಗಿಸಬೇಕಿದೆ ಎಂದರು.ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ಯಲಿಯೂರು ಗ್ರಾಪಂ ಅಧ್ಯಕ಼ೆ ಆಂಜೀನಮ್ಮ, ಉಪಾಧ್ಯಕ್ಷ ಪ್ರಿಯಾಂಕ ಮೋಹನ್ , ವಾರ್ಡನ್ ಬಸವರಾಜ್, ಮುಖಂಡರಾದ ಆನಂದ್ ಗೌಡ, ಬಿ.ಜೆ.ಪಿ.ಮಾಜಿ ತಾಲ್ಲೂಕು ಅಧ್ಯಕ್ಷ ಹನುಮಂತ ರಾಯಪ್ಪ, ಮಾನ್ಯ ವೇಂಚರ್ಸ್ ಹಾಗೂ ಪರಿಕರ ವಿತರಣೆ ದಾನಿಗಳಾದ ಶ್ರೀನಿವಾಸ ರೆಡ್ಡಿ, ಸಂತೋಷ್, ಪೃಥ್ವಿ ರೆಡ್ಡಿ, ಕೋರಮಂಗಲ, ಆಂಜಿನಪ್ಪ, ಪಿಳ್ಳೆಗೌಡ, ನವೀನ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!