ಉದಯವಾಹಿನಿ,ಇಂಡಿ  : ಜಿಲ್ಲಾ ಪಂಚಾಯತ್  ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಾಕ್ಷರತಾ ಇಲಾಖೆ ಇಂಡಿ ಹಾಗೂ ಮುರಾರ್ಜಿ ವಸತಿ ಶಾಲೆ ಲಚ್ಯಾಣ ಇವರ ಸಹಯೋಗದಲ್ಲಿ ಶಿಕ್ಷಣ ಕಾಶಿ ಎಂದು ಹೆಸರುವಾಸಿಯಾಗಿದ್ದ ಲಚ್ಯಾಣ ಗ್ರಾಮದಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಆಯೋಜನೆ ಮಾಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತಗೌಡ ಬಿರಾದಾರ ವಹಿಸಿದ್ದರು ಅವರು ಶ್ರೀ ಸಿದ್ದಲಿಂಗ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಿದರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ದೈಹಿಕ ಶಿಕ್ಷಣಾಧಿಕಾರಿ ಗಳಾದ ಎಂ ಎಸ್ ಲಾಳಸೇರಿ ಮಾತನಾಡುತ್ತಾ ಜನಾಂಗೀಯ ದ್ವೇಷವನ್ನು ಮರೆತು ಎಲ್ಲರೂ ಒಂದಾಗಿ ಬಾಳಬೇಕು ಮತ್ತು ಭಾರತ ದೇಶವು ವಿಶ್ವದಲ್ಲಿ ವೈಜ್ಞಾನಿಕವಾಗಿ ಮುಂದುವರಿದ ದೇಶವಾಗಿದೆ ಕ್ರೀಡೆಯಲ್ಲಿಯು ಮುಂದುವರಿಯಬೇಕಾಗಿದೆ ಯುವಕರು ಮತ್ತು ವಿದ್ಯಾರ್ಥಿಗಳು ಆರೋಗ್ಯ ಮತ್ತು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಹೇಳಿದರು ಕ್ರೀಡೆಯಲ್ಲಿ ಸೂಲು ಮತ್ತು ಗೆಲುವು ಸಾಮಾನ್ಯ ಎರಡನ್ನು ಕ್ರೀಡಾ ಮನೋಭಾವ ದಿಂದ ನೋಡಬೇಕು ಎಂದು ಹೇಳಿದರು ಯುವಜನರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ತಂದು ದೇಶದ ಗರಿಮೆಯನ್ನು ಇನ್ನೂ ಎತ್ತರಕ್ಕೆ ಒಯ್ಯಬೇಕು ಎಂದು ಹೇಳಿದರು ಕ್ರೀಡಾ ಪಟುಗಳಿಗ ಪ್ರತಿಜ್ಞಾ ವಿಧಿಯನ್ನು ಭೋಧಿಸಲಾಯಿತು ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಅರವಿಂದ್ ಕರಾಳೆ.ದೊ ಡಗೌಂಡಪ್ಪ ಬಿರಾದಾರ.ರಾಜು  ನದಾಫ.ಗುರುನಾಥ ಮುಜಗೌಂಡ ಮತ್ತು   ಮುಜಗೌಂಡ.ಶಂಕರ ಅವಜಿ.ಮೂರಾಜಿ೯ ವಸತಿ ಶಾಲೆಯ ಮುಖ್ಯೋಪಾಧ್ಯಾಯ ರಾದ ‌ಎಸ್ ಬಿ ಸಂಖ ಎಚ್ ಎಸ್ ಗೊಟ್ಯಾಳ.ಎಲ್ ಆರ್ ನಾಯ್ಕ.ಡಿಜಿ ಬಿರಾದಾರ .ಟಿ ಎಸ್ ಹೊಸಮನಿ ದಯಾನಂದ ಕೊಳ್ಳಿ. ಹಾಗೂ ಅನೇಕ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!