
ಉದಯವಾಹಿನಿ, ತಾಳಿಕೋಟಿ: ಭಾರತೀಯ ಸಂಶೋಧನಾ ಸಂಸ್ಥೆ ಇಸ್ರೋದಿಂದ ಮೂರನೇ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವುದರಿಂದ ಹರ್ಷ ವ್ಯಕ್ತಪಡಿಸಿದ ಚಿಂತಕ ಡಾ. ಬಸವರಾಜ ಅಸ್ಕಿ ಕೊಣ್ಣೂರ್ ಅವರು ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಭಾರತದ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮದಿಂದ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆಗೆ ಇಳಿಯಲು ಸಾಧ್ಯವಾಗಿದೆ ಇದು ಭಾರತದ ವಿಜ್ಞಾನಿಗಳ ಐತಿಹಾಸಿಕ ಸಾಧನೆಯಾಗಿದೆ ಭಾರತ ಈ ಸಾಧನೆಗೈದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿದೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಈ ಯಶಸ್ವಿನ ಹಿಂದೆ ಅಸಂಖ್ಯಾತ ವಿಜ್ಞಾನಿಗಳ ಶ್ರಮ ಅಡಿಗೆಗೆ ಇದರಲ್ಲಿ ರಾಜ್ಯದ ಇಬ್ಬರು ವಿಜ್ಞಾನಿಗಳು ಇರುವುದು ಇನ್ನೂ ಹೆಚ್ಚಿನ ಸಂತೋಷದ ವಿಷಯವಾಗಿದೆ ಎಂದು ಅವರು ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿರುವುದು ಅಸಾಮಾನ್ಯವಾದ ಕಾರ್ಯ ಇದು ಅಷ್ಟು ಸುಲಭವಾಗಿರಲಿಲ್ಲ ಇದನ್ನು ನಮ್ಮ ವಿಜ್ಞಾನಿಗಳ ತಂಡ ಸಾಧಿಸಿ ತೋರಿಸಿದೆ ಅವರಿಗೆ ಇಡೀ ದೇಶ ಕೃತಜ್ಞವಾಗಿದೆ ಎಂದರು.
