
ಉದಯವಾಹಿನಿ, ಹೊಸಕೋಟೆ :ದೇವರಅಪ್ಪಣೆಇಲ್ಲದೆ ಭೂಮಿಯ ಮೇಲೆ ಒಂದು ಹುಲ್ಲುಕಡ್ಡಿಅಲುಗಾಡುವುದಿಲ್ಲ ಇದನ್ನು ಪ್ರತಿಯೊಬ್ಬರುಅರಿತುಕೊಂಡು ನ್ಯಾಯ, ನೀತಿ,ಧರ್ಮದ ಹಾದಿಯಲ್ಲಿ ನಡೆದುಜೀವನ ಸಾಗಿಸುವಂತಾಗಬೇಕುಎAದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಮೋತಕದಹಳ್ಳಿಯಲ್ಲಿ ನಡೆದಶ್ರೀರಾಧಾ ರುಕ್ಮಣಿ ಸಮೇತ ಶ್ರೀ ವೇಣುಗೋಪಾಲಸ್ವಾಮಿದೇವಾಲಯಜೀಣೋದ್ಧಾರ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಪೂಜಾಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ದೇವರ ಮೇಲಿನ ಭಯಇಲ್ಲದಂತಾಗಿದೆ.ದೇವಾಲಯಗಳಿಗೆ ಹೋಗುವುದರಿಂದ ಮನಸ್ಸು ಶುದ್ದವಾಗುತ್ತದೆ.ಶಾಂತಿಗಾಗಿ ಹುಡುಕುವುದುದೇವರನ್ನು, ಆದ್ದರಿಂದ ದೇವಾಲಯಗಳು ಶಾಂತಿಗೆ ಪೂರಕ ವಾತಾವರಣ ನಿರ್ಮಿಸಬೇಕು.ದೇವಾಲಯಗಳಲ್ಲಿ ಆಡಂಬರಬೇಕಿಲ್ಲಎAದು ಹೇಳಿದರು. ವಿಧಾನ ಪರಿಷತ್ ಸದಸ್ಯ ನಾಗರಾಜ್‌ಯಾದವ್ ಮಾತನಾಡಿ, ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ದೇವಾಲಯಗಳು ಸಹಕಾರಿಯಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿನಎಲ್ಲಾ ವರ್ಗದಜನರನ್ನುಒಗ್ಗೂಡಸಲಿವೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ. ಕಾರ್ಯಕ್ರಮದಲ್ಲಿವಿಧಾನಪರಿಷತ್ ಸದಸ್ಯ ನಾಗರಾಜ್‌ಯಾದವ್,ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ,ಆಹಾರ ಮತ್ತು ನಾಗರಿಕಇಲಾಖೆಯ ನಿವೃತ್ತಜಂಟಿ ನಿರ್ದೇಶಕ ಎಂ.ಸಿ.ಶ್ರೀನಿವಾಸಯ್ಯ, ಮೋತಕದಹಳ್ಳಿ ಗ್ರಾಮದ ಮುಖಂಡರಾದ ಎಂಸಿ ಮುನಿರಾಜು, ಎಮ್.ಸಿ.ಕುಮಾರ್, ಶಿವಕುಮಾರ್, ಅಶ್ವಥ್ ನಾರಾಯಣ, ಮುನಿರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
