ಉದಯವಾಹಿನಿ, ದೇವರಹಿಪ್ಪರಗಿ: ಕರ್ನಾಟಕ ಪ್ರದೇಶ ತಾಲೂಕು ಕುರುಬರ ಸಂಘದ ಅಡಿಯಲ್ಲಿ ಇದೇ ತಿಂಗಳ ದಿ.28ರಂದು ನೂತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತ ಹಾಗೂ ಮೂರ್ತಿಯ ಅನಾವರಣ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರುಡಿ ಹಾಗೂ ಪದಾಧಿಕಾರಿಗಳ ತಿಳಿಸಿದ್ದಾರೆ.
ಪಟ್ಟಣದ ಬಿಎಲ್ ಡಿ ಇ ಕಾಲೇಜ್ ಆವರಣದಲ್ಲಿ ಸೋಮವಾರದಂದು ದೇಶಭಕ್ತ, ಸ್ವಾತಂತ್ರ್ಯ ಪ್ರೇಮಿ, ರಾಣಿ ಚೆನ್ನಮ್ಮನ ಬಲಗೈ ಬಂಟ ಶೂರ ಸಂಗೋಳ್ಳಿ ರಾಯಣ್ಣನ ಸುಮಾರು 8.5 ಫುಟ್ ಎತ್ತರದ ಮೂರ್ತಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಅಂದು ಬೆಳಗ್ಗೆ 9:00ಗಂಟೆಗೆ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದಿಂದ ಡೊಳ್ಳು ಕುಣಿತ, ಗೊಂಬೆ ಕುಣಿತ, ಜಾನಪದ ಕಲಾತಂಡಗಳ ಮೂಲಕ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಾಯಣ್ಣನ ಭವ್ಯವಾದ ಫೋಟೋ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 3:00 ಗಂಟೆಗೆ ರಾಯಣ್ಣನ ಮೂರ್ತಿ ಉದ್ಘಾಟನೆಗೊಳ್ಳಲಿದ್ದು ನಂತರ
ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಕಾರ್ಯಕ್ರಮದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಕನಕ ಗುರು ಪೀಠದ ಸಿದ್ದರಮಾನಂದಪುರಿ ಮಹಾಸ್ವಾಮಿಗಳು,ಸರೂರಿನ ಶಾಂತಮಯ ಮಹಾ ಸ್ವಾಮಿಗಳು, ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಹುಲಜಂತಿಯ ಮಹಾಳಿಂಗರಾಯ ಮಹಾರಾಜರು, ಸದಯ್ಯನ ಮಠದ ಷ ಬ್ರ ವೀರಗಂಗಾಧರ ಶಿವಾಚಾರ್ಯರು, ಪಟ್ಟದ ಪೂಜಾರಿಗಳಾದ ಸೋಮರಾಯ ಪೂಜಾರಿ, ಡಾ. ಸತೀಶ್ ನಾಡಗೌಡ ಸಾನಿಧ್ಯ ವಹಿಸಲಿದ್ದಾರೆ.
ಮಾಜಿ ಉಪಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜ್ಯೋತಿ ಬೆಳಗಿಸಲಿದ್ದಾರೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಗೌರವ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವರುಗಳಾದ ಎಂಟಿಬಿ ನಾಗರಾಜ, ಭೈರತಿ ಬಸವರಾಜ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಮನಗೂಳಿ, ಎಂಎಲ್ಸಿ ಸುನಿಲಗೌಡ ಪಾಟೀಲ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮೂರ್ತಿ ಅನಾವರಣಗೊಳಿಸಲಿದ್ದಾರೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ಮಾಜಿ ಜಿಪಂ ಸದಸ್ಯೆ ಗೌರಮ್ಮ ಮುತ್ತತ್ತಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾಜಿ ಶಾಸಕ ರಮೇಶ ಭೂಸನೂರ, ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ ಪುಷ್ಪಾರ್ಚನೆ ಮಾಡಲಿದ್ದಾರೆ. ಡಾ.ಪ್ರಬುಗೌಡ ಲಿಂಗದಳ್ಳಿ ಚಬನೂರ ಸಸಿಗೆ ನೀರುಣಿಸಲಿದ್ದಾರೆ. ಸಿದ್ದು ಬುಳ್ಳಾ ಹಾಗೂ ರಾಜು ಕಂಬಾಗಿ ನೇತೃತ್ವ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿ.ಡಿ.ಪಾಟೀಲ, ಎಂ.ಎನ್.ಮದರಿ, ರಾಜು ಬಿರಾದಾರ, ರಾಜಶೇಖರ ಅವಜಿ,ಕಬೂಲ್ ಕೂಕಟನೂರ, ಸಾಯಿಬಣ್ಣ ಮಾಶ್ಯಾಳ, ಸಿ.ಬಿ.ಅಸ್ಕಿ ಸೇರಿದಂತೆ ಪ ಪಂ ಸದಸ್ಯರು, ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಅವ್ವಾನಿತರಾಗಿ ನಟ ಲೂಸ್ ಮಾದ ಯೋಗಿ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಭಾಗವಹಿಸಲು ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರುಡಿ, ಶರಣು ಪೂಜಾರಿ, ಸುನೀಲ ಮಾಗಿ, ವಿದ್ಯಾಧರ ಸಂಗೋಗಿ ಸೇರಿದಂತೆ ಯುವ ಘಟಕದ ಹಾಗೂ ನಗರ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
