ಉದಯವಾಹಿನಿ, ಚಿಂಚೋಳಿ: ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಸೇವಾ ಹಿರಿತನ ಪರಿಗಣಿಸಿ,ಸೇವಾ ಭದ್ರತೆ ಒದಗಿಸಬೇಕು ಎಂದು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸೈದಾಪೂರ ಹೇಳಿದರು.
ಪಟ್ಟಣದ ತಹಸೀಲ್ ಕಛೇರಿ ಎದುರು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ವಿವಿಧ ಬೇಡಿಕೆಗಳು ಈಡೇರಿಸುವಂತೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಅತಿಥಿ ಶಿಕ್ಷಕರಿಗೆ ಮಧ್ಯಂತರ ರಜೆ,ಬೇಸಿಗೆ ರಜೆ ಸೇರಿ 12ತಿಂಗಳ ಕಾಲ ವೇತನ ನೀಡಬೇಕು,ಶೇ.5ರಷ್ಟು ಕೃಪಾಂಕ ನೀಡಿ,ವೇತನ ಹೆಚ್ಚಿಸಬೇಕು,ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕು,ಸೇವಾ ದೃಡಿಕರಣ ಪ್ರಮಾಣಪತ್ರ ನೀಡಬೇಕು,ಜೀವ ವಿಮೇ ಸೌಲಭ್ಯ ನೀಡಿ,ಪ್ರತಿ ತಿಂಗಳ ವೇತನ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಬೇಕು,ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು,ಹಾಜರಾತಿಯಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ಎಂದು ಸೇರ್ಪಡೆ ಮಾಡಬೇಕು,ಅತಿಥಿ ಶಿಕ್ಷಕರನ್ನು ಗೌರವ ಶಿಕ್ಷಕರೆಂದು ಹೆಸರು ಬದಲಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ,ಜಗದೇವ ಗೌತಮ್,ಜಗದೀಶ ದೊಡ್ಡಮನಿ,ನಂದಕುಮಾರ ಪಾಟೀಲ,ರೇಣುಕಾ,ರೇವಣಸಿದ್ದ,ರಾಹುಲ್,ಶಿವಕುಮಾರ,ರಾಜೇಂದ್ರ ಹೊಸಮನಿ,ಸಂಜುಕುಮಾರ ಜಟ್ಟೆನೋರ,ಮಲ್ಲೇಶ,ವಿಷ್ಟುವರ್ಧನ್ ರೆಡ್ಡಿ,ರಾಘವೇಂದ್ರ ಹಲಚೇರಾ,ರಾಮಣ್ಣ ಫತ್ತೇಪೂರ,ವಿಜಯಕುಮಾರ,ಸಿದ್ದಣ್ಣ ಹಸರಗುಂಡಗಿ,ಇತರರು ಇದ್ದರು.
