ಉದಯವಾಹಿನಿ, ಹರಾರೆ: ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್‌ ನಂಗಾಗ್ವ ಅವರು ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಝುನು -ಪಿಎಫ್ (ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್-ಪೆಟ್ರಿಯಾಟಿಕ್ ಫ್ರಂಟ್) ಆಡಳಿತಾರೂಢ ಪಕ್ಷವಾಗಿ ಹೊರಹೊಮ್ಮಿದೆ. ಎಮರ್ಸನ್‌ ನಂಗಾಗ್ವ ಅವರಿಗೆ ವಿಪಕ್ಷ ಎಂಡಿಸಿ-ಟಿ (ಮೂವ್‌ಮೆಂಟ್‌ ಫಾರ್‌ ಡೆಮಾಕ್ರಿಟಿಕ್‌ ಚೇಂಜ್‌) ನಾಯಕ ನೆಲ್ಸನ್‌ ಛಾಮಿಸಾ ನಡುವೆ ತೀವ್ರ ಸ್ಪರ್ಧೆ ನೀಡಿದ್ದರು.
1980ರಲ್ಲಿ ದೇಶ ಸ್ವಾತಂತ್ರ್ಯವಾದ ನಂತರದಿಂದ ಅಧಿಕಾರ ನಡೆಸಿದ ರಾರ್ಬಟ್‌ ಮುಗಾಬೆ 2018ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ದೇಶದಲ್ಲಿ 1987ರಲ್ಲಿ ಅಧ್ಯಕ್ಷೀಯ ಪದ್ಧತಿ ಜಾರಿಯಾಗುವವರೆಗೆ ಪ್ರಧಾನಿಯಾಗಿದ್ದ ಇವರು, 2017ರ ನವೆಂಬರ್‌ನಲ್ಲಿ ಪದಚ್ಯುತರಾಗುವವರೆಗೂ ಅಧ್ಯಕ್ಷರಾಗಿದ್ದರು. ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಕೀರ್ತಿ ಮುಗಾಬೆ ಅವರದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!