ಉದಯವಾಹಿನಿ, ಟೆಹರಾನ್: ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ವರ್ಜಾಘನ್ ನಗರದ ಬಳಿ ಪರ್ವತಾರೋಹಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಕಂದಕಕ್ಕೆ ಉರುಳಿಬಿದ್ದು ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮಾಧ್ಯಮ ‘ಇರ್ನಾ’ ಶನಿವಾರ ವರದಿ ಮಾಡಿದೆ.
ಮಿನಿಬಸ್ ಪರ್ವತ ಪ್ರದೇಶದ ಪ್ರವಾಸಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕಂದಕಕ್ಕೆ ಉರುಳಿ ಬಿದ್ದಿದೆ.
ಚಾಲಕ ಸೇರಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ತುರ್ತು ಸೇವೆಗಳ ವಕ್ತಾರ ವಹಿದ್ ಶಾದಿನಿಯಾ ಹೇಳಿರುವುದಾಗಿ ಅದು ವರದಿ ಮಾಡಿದೆ.
