ಉದಯವಾಹಿನಿ, ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶ ಗಡಿಯ ಸಮೀಪದಲ್ಲಿ ₹3.12 ಕೋಟಿ ಮೌಲ್ಯ ಚಿನ್ನದ ಬಿಸ್ಕತ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್ ಚೆಕ್‌ಪಾಯಿಂಟ್‌ನಲ್ಲಿ ತಪಾಸಣೆ ನಡೆಸಿದ ಬಿಎಸ್‌ಎಸ್, ಟ್ರಕ್‌ನಲ್ಲಿ ಸಾಗಿಸುತ್ತಿದ್ದ ₹3.12 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ ವಶಪಡಿಸಿದೆ. ಈ ಟ್ರಕ್ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿತ್ತು. ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
