ಉದಯವಾಹಿನಿ, ಕೊಪನ್‌ಹೆಗನ್: ಭಾರತದ ಎಚ್.ಎಸ್. ಪ್ರಣಯ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದರು.
ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಕುನ್ಲಾವತ್ ವಿತಿದ್‌ಸರನ್ 18-21, 21-13, 21-14 ಗೇಮ್‌ಗಳಿಂದ ಪ್ರಣಯ್ ಅವರನ್ನು ಪರಾಭವಗೊಳಿಸಿದರು.
76 ನಿಮಿಷಗಳ ಹೋರಾಟದಲ್ಲಿ ಪ್ರಣಯ್ ಉತ್ತಮ ಆರಂಭವನ್ನೇ ಮಾಡಿದರು. ಮೊದಲ ಗೇಮ್‌ನಲ್ಲಿ ಮೂರು ಅಂಕಗಳ ಅಂತರದಿಂದ ಜಯಗಳಿಸಿದರು. ಆದರೆ ಇದೇ ಲಯವನ್ನು ಇನ್ನುಳಿದ ಎರಡು ಗೇಮ್‌ಗಳಲ್ಲ ಉಳಿಸಿಕೊಳ್ಳಲಿಲ್ಲ. ಕುನ್ಲಾವತ್ ಪುಟಿದೆದ್ದರು. ಆತ್ಮವಿಶ್ವಾಸಭರಿತ ಆಟವಾಡಿದ ಅವರು ಪಾರಮ್ಯ ಮೆರೆದರು.
ಮೂರನೇ ರ‍್ಯಾಂಕ್ ಆಟಗಾರ ಕುನ್ಲಾವತ್ ಅವರು ಎರಡು ಗೇಮ್‌ಗಳಲ್ಲಿ ಆಡಿದ ಕರಾರುವಾಕ್ ರ‍್ಯಾಲಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ 9ನೇ ಶ್ರೇಯಾಂಕದ ಪ್ರಣಯ್ ಎಡವಿದರು.
