ಉದಯವಾಹಿನಿ, ಗಬ್ಬೂರು : ದೇವದುರ್ಗ ವಿಧಾನಸಭಾ ನೂತನ ಸದಸ್ಯರಾದ ಕರಿಯಮ್ಮ ಜಿ ನಾಯಕ ಅವರು 50 ನೇ ಹುಟ್ಟು ಹಬ್ಬದ ಪ್ರಯುಕ್ತ ಗಬ್ಬೂರು ಜೆಡಿಎಸ್ ಯುವ ಮುಖಂಡರಿಂದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು,ಬ್ರೆಡ ಹಾಗೂ ಬಿಸ್ಕೇಟ್ಗಳನ್ನು ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಜನಮೆಚ್ಚಿದ ನಾಯಕಿ,ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿ ಕ್ಷೇತ್ರದ ಸಾಮಾನ್ಯ ಜನರಿಗೂ ಕೂಡ ಶಾಸಕರನ್ನು ದಿನಪೂರ್ತಿ ಬೇಟಿಯಾಗಿ ಜನರೊಟ್ಟಿಗೆ ಬೆರೆಯುವ ಮೂಲಕ ತಾಲ್ಲೂಕಿನಲ್ಲಿ ಸಾಮಾನ್ಯ ಶಾಸಕರೆಂದೇ ಖ್ಯಾತಿಯಾದ ದೇವದುರ್ಗ ವಿಧಾನ ಸಭೆಯ ನೂತನ ಶಾಸಕರಾದ ಕರಿಯಮ್ಮ ಜಿ ನಾಯಕ ಅವರ 50 ನೇ ಹುಟ್ಟು ಹಬ್ಬವನ್ನು ಗಬ್ಬೂರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಡರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಬಾಳೆ,ಸೇಬು,ಮೋಸಂಬಿ ಹಣ್ಣುಗಳನ್ನು ಹಾಗೂ ಬ್ರೆಡ್ ಮತ್ತು ಬಿಸ್ಕೇಟಗಳನ್ನು ಹಂಚುವ ಮೂಲಕ ಜನ್ಮದಿನವನ್ನು ಆಚರಿಸಿದರು. ಅಲ್ಲದೇ ಇನ್ನಷ್ಟು ಜನಸೇವೆ ಮಾಡಲು ಅವರಿಗೆ ದೇವರು ಆರೋಗ್ಯ,ಸಿರಿ ಸಂಪತ್ತು ಹಾಗೂ ಯಶಸ್ಸು ದೊರೆಯಲೆಂದು ಆರೈಸಿದರು
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡರಾದ ಶಿವರಾಜ ಜಗ್ಲಿ,ಅಲಾಂಘನಿ ಗಬ್ಬೂರು,ಷರೀಫ್ ಬೇಗ್,ಬೂದೆಪ್ಪ ಯಾದವ್,ಬೂದೆಪ್ಪ ಮಡಿವಾಳ,ಅಲ್ಲಾವಲಿ ಹಾಗೂ ಇನ್ನಿತರ ಕಾರ್ಯಕರ್ತರು ಭಾಗಿಯಾಗಿದ್ದರು.
