
ಉದಯವಾಹಿನಿ ಮುದಗಲ್ಲ : ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಗಸ್ಟ್ 30 ರಂದು ಸರಕಾರದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ನಡೆಯಲಿದ್ದು ಆದಕಾರಣ ಮಹಿಳಾ ಹಾಗೂ ಮಕ್ಕಳ ಇಲಾಖೆ ಯಿಂದ ಪುರಸಭೆ ಯ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರ ಅಧ್ಯಕ್ಷತೆ ಯಲ್ಲಿ ಪೂರ್ವ ಭಾವಿಸಭೆ ನಡೆಯಿತು. ಈ ಸಂದರ್ಭದಲ್ಲಿ ನಭಿಸಾಬ ಕಂದಗಲ್ಲ ಅವರು ಮಾತನಾಡಿ ಈಗಾಗಲೇ ಯೋಜನೆಯಡಿ ನೊಂದಣಿಯಾಗಿರುವ ಫಲಾನುಭವಿಗಳಿಗೆ, ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮುಖ್ಯ ಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಸಂದೇಶ ಬರುವು ದರಿಂದ ನೊಂದಾಯಿತ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಕೊಂಡಿರುವ ಮೊಬೈಲ್ ಫೋನ್ ಗಳೊಂದಿಗೆ ಮುದಗಲ್ಲ ಪಟ್ಟಣದ ಶ್ರೀ ರಾಮ ಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ, ಕಾರ್ಯಕ್ರಮ ವನ್ನು ವೀಕ್ಷಣೆ ಮಾಡಲು ಎಲ್ಇಡಿ ವಾಲ್ ವ್ಯವಸ್ಥೆ ಗೊಳಿಸಲಾಗುಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ನಿಮ್ಮ ಅಕ್ಕ ಪಕ್ಕದ ಮನೆಯ ಮಹಿಳೆಯರಿಗು ಮಾಹಿತಿ ನೀಡಿ ಅವರು ಭಾಗವಹಿಸಿ ವಂತೆ ಮಾಡಿ ಕಾಯ೯ಕ್ರಮ ವನ್ನು ಯಶಸ್ವಿಯಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಹಾಗೂ ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ಹಾಗೂ ಮುದಗಲ್ಲನ ಸ್ಥಳೀಯ ಮಹಿಳಾ ಗುಂಪುಗಳು ಉಪಸ್ಥಿತರಿರು
