ಉದಯವಾಹಿನಿ , ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ದೇಶದ ೧೦೧ಕ್ಕೂ ಹೆಚ್ಚು ಉಪ ಜಲಾನಯನ ಪ್ರದೇಶಗಳಲ್ಲಿ ಮಳೆ ನೀರಿನ ಪ್ರಮಾಣ ಕುಸಿತ ಕಂಡಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಅದರಲ್ಲಿಯೂ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇರುವ ಕೃಷ್ಣಾ ಜಲಾನಯನ ಪ್ರದೇಶದ ಕೆಲವು ಭಾಗಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ.ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿರುವ ಕೃಷ್ಣಾ ಜಲಾನಯನ ಭಾಗ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ನೀರು ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.ಉತ್ತರಾಖಂಡ, ಉತ್ತರ ಪ್ರದೇಶ,ಮದ್ಯ ಪ್ರದೇಶ ರಾಜಸ್ಥಾನ, ಹರಿಯಾಣ, ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ದೆಹಲಿಯನ್ನು ಒಳಗೊಂಡಿರುವ ಗಂಗಾ ಜಲಾನಯನ ಪ್ರದೇಶಗಳಲ್ಲಿ ಇದೇ ರೀತಿ ಸಮಸ್ಯೆ ಎದುರಿಸುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮುಂಗಾರು ಕುಸಿತ ಮತ್ತು ಎಲ್ ನಿಲ್ ಪ್ರಭಾವದ ನಂತರ ದೇಶಾದ್ಯಂತ ವಿವಿಧ ಉಪ-ಜಲಾನಯನ ಪ್ರದೇಶಗಳಲ್ಲಿ ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಮಳೆನೀರಿನ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ ಎಂದು ಹೇಳಿದೆ.
೧೦೧ ಉಪ-ಜಲಾನಯನ ಪ್ರದೇಶಗಳ ವಿಶ್ಲೇಷಣೆ ಮಾಡಿರುವ ಹವಾಮಾನ ಇಲಾಖೆ ಭಾರತದಲ್ಲಿನ ೨೭ ಪ್ರಮುಖ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿವೆ. ಸ್ಥಾಪಿತ ಮಾನದಂಡಗಳಿಗೆ ಹೋಲಿಸಿದರೆ -೧೪೯ ಟಿಎಂಸಿ- ಸಾವಿರ ಮಿಲಿಯನ್ ಘನ ಅಡಿಗಳು ನಿಂದ-೫೨೮ ಟಿಎಂದಿ ವರೆಗಿನ ನೀರಿನ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಆತಂಕಕಾರಿ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!