ಉದಯವಾಹಿನಿ, ಮ್ಯಾಡ್ರಿಡ್ : ಕೆಲ ದಿನಗಳ ಹಿಂದೆ ನಡೆದ ಮಹಿಳಾ ವಿಶ್ವಕಪ್ ಫೈನಲ್‌ನ ಪ್ರಸಸ್ತಿ ಸಮಾರಂಭದ ವೇಳೆ ಸ್ಪೇನ್ ಆಟಗಾರ್ತಿ ಹರ್ಮೊಸೊ ತುಟಿಗೆ ಮುತ್ತು ನೀಡಿ ಭಾರೀ ವಿವಾದಕ್ಕೆ ಗುರಿಯಾಗಿರುವ ಸ್ಪೇನ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್ ರಾಜೀನಾಮೆ ಇದೀಗ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ. ಅಧ್ಯಕ್ಷ ಹುದ್ದೆಯಿಂದ ಕೂಡಲೇ ರುಬಿಯಾಲ್ಸ್‌ರನ್ನು ತೆರವುಗೊಳಿಸಬೇಕೆಂದು ಇದೀಗ ಸ್ಪೇನ್ ಫುಟ್ಬಾಲ್‌ನ ಪ್ರಾದೇಶಿಕ ಮುಖ್ಯಸ್ಥರು ಆಗ್ರಹಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪ್ಯಾನಿಷ್ ಪ್ರಾಸಿಕ್ಯೂಟರ್‌ಗಳು ಘಟನೆಯಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆಯೇ ಎಂಬ ಬಗ್ಗೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದರು. ಆದರೆ ನಡುವೆ ನಾಟಕೀಯ ಬೆಳವಣಿಗೆಯಲ್ಲಿ ರುಬಿಯಾಲ್ಸ್ ಅವರ ತಾಯಿ ಚರ್ಚ್‌ನೊಳಗೆ ತನ್ನನ್ನು ತಾನು ಕೂಡಿಹಾಕಿಕೊಂಡು, ಮಗನ ಜೊತೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದರು. ಈ ನಡುವೆ ಮ್ಯಾಡ್ರಿಡ್‌ನಲ್ಲಿ ಹರ್ಮೊಸೊಗೆ ಬೆಂಬಲ ಸೂಚಿಸಿ ಹಾಗೂ ರುಬಿಯಾಲ್ಸ್ ರಾಜೀನಾಮೆಗೆ ಆಗ್ರಹಿಸಿ ಮಹಿಳಾ ಪರ ಗುಂಪು ಪ್ರತಿಭಟನೆ ನಡೆಸಿದ್ದವು. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಹಠ ಹಿಡಿದುಕೊಂಡಿದ್ದ ರುಬಿಯಾಲ್ಸ್‌ನನ್ನು ಈಗಾಗಲೇ ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಅಮಾನತುಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!